ಚಾರ್ಲಿ ಸಿನಿಮಾ ಹೇಗಿದೆ..? ಚೆನ್ನಾಗಿದಿಯೇ ? ನಾಯಿ ಸತ್ತು ಹೋಗುತ್ತದೆಯೇ ? ನಾಯಿ ಸಿನಿಮಾ ನೋಡೋಕೆ ಅದೆಷ್ಟು ಜನ ಬರ್ತಿದ್ದಾರೆ. ಸಿನಿಮಾ ಗ್ಯಾರಂಟಿ ಹಿಟ್ಟಾ ? ಮೊನ್ನೆ ಶುಕ್ರವಾರ ತೆರೆ ಕಂಡ ಚಾರ್ಲಿ ಸಿನಿಮಾದ ಓಪನ್ ಟಾಕ್ ಇದು. ಸಿನಿಮಾ ನೋಡಿ ಹೊರ ಬಂದ್ಮೇಲೆ ಪ್ರಶ್ನೆಗಳೇ ಇರೋದಿಲ್ಲ. ಎಲ್ಲ ಪ್ರಶ್ನೆಗಳೂ ಭಾವನೆಗಳಾಗಿ ಮನದ ಆಳದಲ್ಲಿ ಉಳಿದು ಬಿಡುತ್ತವೆ.
ಟ್ರಿಪಲ್ 7 ಚಾರ್ಲಿ ಸಿನಿಮಾ ಒಂದು ಅದ್ಭುತ ಸಿನಿಮಾ. ಈ ಸಿನಿಮಾದ ಕತೆ ಎಮೋಷ್ನಲ್ ಆಗಿಯೇ ಇದೆ. ಮಾತೇ ಬಾರದ ಶ್ವಾನ ಚಾರ್ಲಿ, ನಿಮ್ಮ ಹೃದಯದಲ್ಲಿ ಹೇಳದೆ ಕೇಳದೆ ಬಂದು ಬಿಡ್ತಾಳೆ. ಈಕೆಯ ಪ್ರತಿ ನೋಟವೂ ಮುಗ್ದ..ಮುಗ್ದವಾಗಿಯೇ ಮನದ ಆಳಕ್ಕೆ ಇಳಿದು ಬಿಡುತ್ತದೆ. ಅದೆಷ್ಟು ಅಂದ್ರೆ, ನಮ್ಮನೆಯಲ್ಲೂ ಒಬ್ಬಳು ಚಾರ್ಲಿ ಇದ್ರೆ ಎಷ್ಟು ಚೆಂದ ಅನ್ನೋ ಮಟ್ಟಿಗೆ ಈ ಚಾರ್ಲಿ ಕಾಡುತ್ತಾಳೆ.
ಚಾರ್ಲಿ ಗೆಳೆಯ ಧರ್ಮ (ರಕ್ಷಿತ್ ಶೆಟ್ಟಿ) ನಮ್ಮ-ನಿಮ್ಮ ಮನದಲ್ಲಿ ಅಚ್ಚೊತ್ತಲು ಚಾರ್ಲಿನೇ ಕಾರಣ ಆಗ್ತಾಳೆ. ಚಾರ್ಲಿಯ ಜರ್ನಿ ಪ್ರೇಕ್ಷಕರ ಹೃಯದಲ್ಲಿ ಆರಂಭದಿಂದಲೇ ಜಾಗ ಮಾಡಿಕೊಂಡು ಹೋಗುತ್ತದೆ. ಈಕೆಯ ಸುತ್ತ ನಡೆಯೋ ಕಥೆಗಳು ಸಾಮಾನ್ಯ ಅನಿಸೋದು ಕಡಿಮೆ. ಆದರೆ, ಈಕೆಯ ಕೊನೆ ನಮ್ಮನ್ನ ಕಾಡುತ್ತದೆ. ಈಕೆ ಕೊನೆಯಲ್ಲಿ ಕೊಟ್ಟು ಹೋಗುವ ಆ ಬ್ಲಾಕ್ ಗಿಫ್ಟ್ ಎಲ್ಲರ ಮನದಲ್ಲೂ ಉಲ್ಲಾಸ ಮೂಡಿಸುತ್ತದೆ. ಧರ್ಮ ಕೂಡ ಒಂದು ಸಂದೇಶ ಇಲ್ಲಿ ಕೊಟ್ಟಿದ್ದಾನೆ. ಡೈರೆಕ್ಟರ್ ಕಿರಣ್ ರಾಜ್ ಕೆಲಸ ವೆಲ್ ಡನ್ ಅಂತ ಹೇಲೇಬೇಕು ಅನಿಸುತ್ತದೆ. ಇದನ್ನ ಓದಿದ್ಮೇಲೆ ಸಿನಿಮಾ ನೋಡಬೇಕು ಅನಿಸಿದ್ರೆ, ಒಮ್ಮೆ ಹೋಗಿ ಸಿನಿಮಾ ನೋಡಿ. ಖುಷಿ ಆಗುತ್ತದೆ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
13/06/2022 10:55 pm