ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಬ್ಬದ ಪ್ರಯುಕ್ತ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ಎರಡು ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿವೆ. ಈ ಎರಡೂ ಚಿತ್ರಗಳಲ್ಲಿ ಯಂಗ್ ರೆಬಲ್ ವಿಶೇಷವಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.
ಅಭಿಷೇಕ್ ಅಂಬರೀಶ್ ಅಭಿನಯದ ಇನ್ನೂ ಹೆಸರಡಿದ ಚಿತ್ರಕ್ಕೆ ಮದಗಜ,ಅಯೋಗ್ಯ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಕತೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಒಂದು ಚಿತ್ರದ ವಿಶೇಷ ರೂಪದ ಮೋಷನ್ ಪೋಸ್ಟರ್‌ಅನ್ನೂ ಡೈರೆಕ್ಟರ್ ಮಹೇಶ್ ಈಗಾಗಲೇ ರಿಲೀಸ್ ಮಾಡಿದ್ದಾರೆ.
ಮುಂಗಾರು ಮಳೆ ಖ್ಯಾತಿಯ ಕೃಷ್ಣ ನಿರ್ದೇಶನದಲ್ಲೂ ಅಭಿಷೇಕ್ ಅಂಬರೀಶ್ ಅಭಿನಯಿಸುತ್ತಿದ್ದಾರೆ. ಈ ಒಂದು ಚಿತ್ರಕ್ಕೆ "ಕಾಳಿ" ಅನ್ನೋ ಹೆಸರನ್ನೂ ಇಡಲಾಗಿದೆ.
PublicNext
29/05/2022 04:03 pm