ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ಸೂಪರ್ ಮಾಡೆಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮಂಜುಶಾ ನಿಯೋಗಿ ಆತ್ಮಹತ್ಯೆಗೆ ಶರಣಾಗಿರುವ ಖ್ಯಾತ ಮಾಡೆಲ್. ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಮಂಜುಶಾ ನಿಯೋಗಿ ಶವ ಪತ್ತೆಯಾಗಿದೆ. ಮಂಜುಶಾ ತಮ್ಮ ಕುಟುಂಬಸ್ಥರೊಂದಿಗೆ ಪಟುಲಿಯಲ್ಲಿ ವಾಸವಾಗಿದ್ದರು.
ಕಳೆದ ಎರಡು ದಿನಗಳ ಹಿಂದಷ್ಟೆ ಬಿದುಶಾ ಎಂಬ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೆ ಮಂಜುಶಾ ಆತ್ಮಹತ್ಯೆಯಾಗೆ ಶರಣಾಗಿದ್ದಾರೆ, ಒಟ್ಟಿನಲ್ಲಿ ಕಳೆದ ಹನ್ನೆರಡು ದಿನದಲ್ಲಿ ಇದು ಮೂವರು ಮಾಡೆಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
PublicNext
27/05/2022 04:38 pm