ಮುಂಬೈ: ಬಾಲಿವುಡ್ ನ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಈಗೊಂದು ಸಿನಿಮಾ ಮಾಡಿದ್ದಾರೆ. ಪೃಥ್ವಿರಾಜ್ ಚೌಹಾಣ್ ಜೀವನಾಧಾರಿತ ಸಿನಿಮಾನೇ ಇದಾಗಿದೆ. ಈ ಒಂದು ವಿಶೇಷ ಸಿನಿಮಾವನ್ನ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನೋಡಲಿದ್ದಾರೆ.
ಸಿನಿಮಾ ತಂಡ ಈ ಒಂದು ವಿಷಯವನ್ನ ಈಗ ರಿವೀಲ್ ಮಾಡಿದ್ದು, ಗೃಹ ಮಂತ್ರಿ ಅಮಿತ್ ಶಾ ಅವರಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ಇದೇ ಜೂನ್-3 ರಂದು ಪೃಥ್ವಿರಾಜ್ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರ ಬಿಡುಗಡೆಯ ಮೂರು ದಿನಗಳ ಮೊದಲೇ ಅಮಿತ್ ಶಾ ಅವರಿಗಾಗಿಯೇ ವಿಶೇಷ ಷೋ ಅರೇಂಜ್ ಮಾಡಲಾಗಿದೆ.
ನಮ್ಮ ಸಿನಿಮಾವನ್ನ ಕೇಂದ್ರ ಗೃಹ ಮಂತ್ರಿ ವೀಕ್ಷಿಸುತ್ತಿದ್ದಾರೆಂಬ ವಿಷಯ ನಮಗೆ ತುಂಬಾ ಖುಷಿ ತಂದಿದೆ ಅಂತಲೂ ಚಿತ್ರದ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಹೇಳಿಕೊಂಡಿದ್ದಾರೆ.
PublicNext
26/05/2022 06:02 pm