ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ತಾರೆಯರು ಮಿಂಚುತ್ತಿದ್ದಾರೆ. ನಟಿಯರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ಊರ್ವಶಿ ರೌಟೇಲಾ ಸೇರಿದಂತೆ ಹಲವು ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಉಡುಪು ತೊಟ್ಟು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಈ ಮಧ್ಯೆ ನಟಿ ದೀಪಿಕಾ ತೊಟ್ಟ ಡ್ರೆಸ್ ಒಂದು ಸಿಕ್ಕಾ ಪಟ್ಟೆ ಟ್ರೋಲ್ ಆಗುತ್ತಾ ಇದೆ.
ಕೇಸರಿ ಬಣ್ಣದ ಬಣ್ಣದ ಬ್ಲೋಯಿಂಗ್ ಗೌನ್ ಹಾಕಿಕೊಂಡ ದೀಪಿಕಾ ನಡೆಯಲು ಹೆಣಗಾಡಿದ್ದಾರೆ. ಇದು ತುಂಬಾ ದೊಡ್ಡ ಗೌನ್ ಆದ ಕಾರಣ ದೀಪಿಕಾ ಈ ಡ್ರೆಸ್ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲು ಕಷ್ಟ ಪಡುತ್ತಿದ್ದರು. ಈ ಡ್ರೆಸ್ ನೋಡಿದ ನೆಟ್ಟಿಗರು ದೀಪಿಕಾ ಬಗ್ಗೆ ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
25/05/2022 03:31 pm