ವಿಶ್ವದಾದ್ಯಂತ ಕೆಜಿಎಫ್ ಚಾಪ್ಟರ್ 2 ಅಬ್ಬರ ಜೋರಾಗಿದೆ. ಹಿಂದಿ, ತಮಿಳು, ತೆಲುಗು ಭಾಷೆಯ ಘಟಾನುಘಟಿ ಸ್ಟಾರ್ಗಳು, ನಿರ್ಮಾಪಕರು, ನಿರ್ದೇಶಕರು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೆಜಿಎಫ್ ಚಾಪ್ಟರ್-2 ಅನ್ನು ಹೃದಯತುಂಬಿ ಕೊಂಡಾಡುತ್ತಿದ್ದಾರೆ.
ಈ ಸಾಲಿಗೆ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಸೇರಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ರನ್ನೂ ಪ್ರಂಶಸಿದ್ದಾರೆ. ಪ್ರಶಾಂತ್ ನೀಲ್ ಅವರೇ ನೀವು ಸ್ಪೆಕ್ಟಾಕುಲರ್ ಶೋ ನೀಡಿದ್ದೀರಿ. ನಿಮ್ಮ ನಂಬಿಕೆ ಮತ್ತು ನೋಟದ ಬಗ್ಗೆ ನನಗೆ ಅತೀವ ಗೌರವ ಇದೆ. ಅದ್ಭುತ ಸಿನಿಮ್ಯಾಟಿಕ್ ಅನುಭವ ನೀಡಿದ್ದಕ್ಕೆ ಮತ್ತು ಭಾರತದ ಸಿನಿಮಾದ ಝಂಡಾ ಎತ್ತರದಲ್ಲಿ ಹಾರುವವಂತೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದರು. ಅಷ್ಟೇ ಅಲ್ಲ ರಾಕಿಂಗ್ ಸ್ಟಾರ್ ಯಶ್ ಬಗ್ಗೆಯೂ ಪ್ರಶಂಸೆಯ ಸುರಿಮಳೆಯನ್ನೇ ಅಲ್ಲು ಅರ್ಜುನ್ ಸುರಿಸಿದ್ದಾರೆ.
ಈಗ ಅಲ್ಲು ಟ್ವೀಟ್ ಗೆ ಯಶ್ ರೀಪ್ಲೆ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರೇ ಥ್ಯಾಂಕ್ಯೂ ಎಂದ ಯಶ್, ನಿಮ್ಮ ಹಾರ್ಡ್ ವರ್ಕ್ ನೋಡಿ ನಾನು ಅಡ್ಮೈರ್ ಆಗಿದ್ದೇನೆ ಎಂದು ಕೊಂಡಿದ್ದಾರೆ.
PublicNext
22/04/2022 10:32 pm