ಬಾಲಿವುಡ್ ನಟಿ ಸೋನಂ ಕಪೂರ್ ತಾಯಿಯಾಗುತ್ತಿರುವ ವಿಚಾರ ರಿವೀಲ್ ಮಾಡುತ್ತಿದ್ದಂತೆ ಪ್ಯಾಪರಾಜಿಗಳು ಮತ್ತು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಕಣ್ಣು ಆಕೆಯ ಮೇಲಿದೆ.
ಸದ್ಯ ಸೋನಂ ಕಪೂರ್ ಬಿಳಿ ಸೀರೆಯಲ್ಲಿ ಮಹಾರಾಣಿ ಹಾಗೆ ಕಾಣಿಸಿಕೊಂಡು ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಕೆಲವೇ ನಿಮಿಷಗಳಲ್ಲಿ ವೈರಲ್ ಕೂಡ ಆಗಿದೆ. ತಾಯಿ ಆಗುತ್ತಿರುವ ಸೋನಂಗೆ ಹಾರೈಕೆಯ ಮಹಾಪುರವೇ ಹರಿದು ಬರುತ್ತಿದೆ. ಕಲಾ ಕುಟುಂಬದಲ್ಲಿ ಜನ್ಮ ತಾಳುತ್ತಿರುವ ಆ ಮಗು ಕಲಾಸೇವೆಯನ್ನು ಮುಂದುವರೆಯಲಿ ಎಂದು ಕೆಲವರು ಆಶೀರ್ವದಿಸಿದ್ದಾರೆ.
PublicNext
04/04/2022 04:58 pm