ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವದಾದ್ಯಂತ ಜುಲೈ-28 ಕ್ಕೆ ವಿಕ್ರಾಂತ್ ರೋಣ ರಿಲೀಸ್ !

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಕನ್ನಡದ ಮಕ್ಕಳ ಈ ಸಿನಿಮಾ ಯಾವ ಹಾಲಿವುಡ್ ಸಿನಿಮಾಕ್ಕೂ ಕಡಿಮೆ ಇಲ್ಲ ಬಿಡಿ ಅನ್ನೋ ಒಂದು ಟೀಸರ್ ಈಗ ರಿಲೀಸ್ ಆಗಿದೆ. ಬನ್ನಿ, ನೋಡೋಣ.

ವಿಕ್ರಾಂತ್ ರೋಣ ಚಿತ್ರ ಒಂದು ರೀತಿ ಕನ್ನಡದ ಹ್ಯಾರಿ ಪಾಟರ್ ರೀತಿನೇ ಇದೆ. ಬಹು ಭಾಷೆಯಲ್ಲಿ ಬರ್ತಿರೋ ಕನ್ನಡದ ಈ ವಿಕ್ರಾಂತ್ ರೋಣ ಜುಲೈ-28 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.

ಮಕ್ಕಳೂ ಇಷ್ಟ ಪಡೋ ಈ ಚಿತ್ರದಲ್ಲಿ ಕಿಚ್ಚನ ಖದರ್ ಬೇರೆ ರೀತಿನೇ ಇದೆ. ಅದನ್ನ ಈ ಟೀಸರ್ ನಲ್ಲೂ ಕಾಣಬಹುದು. ಒಂದು ರೀತಿ ಇದೊಂದು ಮಕ್ಕಳ ಸಾಹಸಮ ಸಿನಿಮಾ ಅಂತಲೇ ಹೇಳೋಬಹುದೇನೋ. ಹಂಗಿದೆ ಈ ಸಿನಿಮಾದ ಟೀಸರ್. ನಿರ್ದೇಶಕ ಅನೂಪ್ ಭಂಡಾರಿ ಕಲ್ಪನೆಯ ಈ ಚಿತ್ರ ಈಗ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ.

Edited By :
PublicNext

PublicNext

02/04/2022 10:10 am

Cinque Terre

59.54 K

Cinque Terre

0