ಬೆಂಗಳೂರು: ಕನ್ನಡ ಚಿತ್ರರಂಗದ ದಿಕ್ಕನ್ನೆ ಬದಲಿಸಿದ ಕೆಜಿಎಫ್ ಚಿತ್ರದ ಹವಾ ಇನ್ನೂ ನಿಂತಿಲ್ಲ. ಮೊದಲ ಭಾಗ ಒಂದು ರೀತಿ ಕಿಚ್ಚು ಹಚ್ಚಿದರೇ, ಎರಡನೇ ಭಾಗದ ಗತ್ತು ಬೇರೆನೆ ಇದೆ. ಚಿತ್ರದ ಪ್ರಚಾರಕ್ಕಾಗಿಯೇ ಇಡೀ ಟೀಂ ಈಗ ವಿಶೇಷ ಚಾರ್ಟೆಡ್ ಫ್ಲೈಟ್ ನಲ್ಲಿ ಪ್ರಯಾಣ ಬೆಳೆಸಿದಿದೆ.
ಹೌದು. ರಾಕಿಂಗ್ ಸ್ಟಾರ್ ಯಶ್ ಮತ್ತು ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಈಗಾಗಲೇ ಫ್ಲೈಟ್ ನಲ್ಲಿ ಪ್ರಯಾಣ ಆರಂಭಿಸಿದ್ದಾರೆ. ಈ ಪ್ರಮೋಷನ್ ಪ್ರಯಾಣದಲ್ಲಿ ಮೊದಲು ಚಿತ್ರ ತಂಡ ಯಾವ ರಾಜ್ಯಕ್ಕೆ ತೆರಳುತ್ತದೆ ಅನ್ನೊ ಕುತೂಹಲ ಇನ್ನೂ ರಿವೀಲ್ ಆಗಿಯೇ ಇಲ್ಲ. ಆದರೆ ಚಿತ್ರದ ಪ್ರಚಾರಕ್ಕೆ ಭಾರಿ ತಯಾರಿ ನಡೆದಿದೆ.
ತೆಲುಗು,ತಮಿಳು, ಹಿಂದಿ, ಕನ್ನಡದ ಹೀಗೆ ಎಲ್ಲ ಭಾಷೆಯಲ್ಲಿಯೇ ಕೆಜಿಎಫ್-2 ಚಿತ್ರದ ಇದೇ ಏಪ್ರಿಲ್-14 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಆ ಹಿನ್ನೆಲೆಯಲ್ಲಿಯೇ ಚಿತ್ರದ ಇಡೀ ತಂಡ ಈಗ ಪ್ರಚಾರಕ್ಕಾಗಿಯೆ ವಿಶೇಷ ಫ್ಲೈಟ್ ಹತ್ತಿದೆ.
PublicNext
31/03/2022 05:08 pm