ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಅನುಪಮ್ ಖೇರ್ ಮಾಡಿರುವ ಪಾತ್ರ ತಮ್ಮ ತಂದೆ ಪುಷ್ಕರ್ ನಾಥ್ ಜೀ ಅವರದ್ದೇನಾ ಎಂಬ ಪ್ರಶ್ನೆಗಳು ಮೂಡಿತ್ತು. ಆದರೆ ಅನುಪಮ್ ಖೇರ್ ಈಗ ಅದಕ್ಕೆ ಉತ್ತರ ಕೊಟ್ಟಿದ್ದಾರೆ.. ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಪುಷ್ಕರ್ ನಾಥ್ ಪಾತ್ರ ಮಾಡಿದ್ದ ಅನುಪಮ್ ಖೇರ್ ಅದನ್ನು ತನ್ನ ತಂದೆ ಪುಷ್ಕರ್ ನಾಥ್ ರಿಗೆ ಅರ್ಪಿಸಿದ್ದಾರೆ.
ತಮ್ಮ ತಂದೆ ಪುಷ್ಕರ್ ನಾಥ್ ಅವರು ಕಾಶ್ಮೀರದಲ್ಲಿ ಹುಟ್ಟಿದ ತಾನು ಕಾಶ್ಮೀರದಲ್ಲಿಯೇ ವಾಸಿಸಬೇಕು, ಕಾಶ್ಮೀರ್ ಪಂಡಿತರನ್ನು ಅಲ್ಲಿಂದ ಓಡಿಸಿದ ಬಳಿಕ ಅವರು ಕಾಶ್ಮೀರಕ್ಕೆ ಹೋಗುವ ಸಲುವಾಗಿಯೇ ಕಾಯುತ್ತಿದ್ದರು. ಆದರೆ ಅವರ ಈ ಕನಸು ನನಸಾಗಲಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸುವ ಮೂಲಕ ನಟ ಅನುಪಮ್ ಖೇರ್ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ತಂದೆ ಜತೆಗಿನ ಫೋಟೊ ಶೇರ್ ಮಾಡಿಕೊಂಡಿದ್ದಾರೆ.
PublicNext
31/03/2022 12:49 pm