ಹಾಲಿವುಡ್ ನಾಯಕ ನಟ ವಿಲ್ ಸ್ಮಿತ್ ನಿನ್ನೆ ನಡೆದ ಆಸ್ಕರ್ ಕಾರ್ಯಕ್ರಮದಲ್ಲಿ ಕಾಮಿಡಿಯನ್ ಕ್ರಿಸ್ ರಾಕ್ ಗೆ ಕಪಾಳಕ್ಕೆ ಹೊಡೆದಿರೋ ಘಟನೆ ಈಗ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.ಈ ಹಿನ್ನೆಲೆಯಲ್ಲಿಯೇ ಬಾಲಿವುಡ್ ನ ಹಿರಿಯ ಹಾಸ್ಯ ನಟ ಪರೇಶ್ ರಾವಲ್ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಟ್ವಿಟ್ ಮಾಡಿದ್ದಾರೆ.
ಹಾಸ್ಯ ಕಲಾವಿದರು ನಿಜಕ್ಕೂ ಎಲ್ಲೆಡೆ ಈಗ 'ಅಪಾಯದ' ಸ್ಥಿತಿಯಲ್ಲಿಯೇ ಇದ್ದಾರೆ. ಕ್ರಿಸ್ ರಾಕ್ ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್. ವಿಲ್ ಸ್ಮಿತ್ ಪತ್ನಿ ಜಾಡಾ ಅವರ ಮೇಲೆ ಕ್ರಿಸ್ ಹಾಸ್ಯ ಮಾಡಿದ್ದಾರೆ. ಅದರಿಂದ ವಿಲ್ ಸ್ಮಿತ್ ಕ್ರಿಸ್ ಗೆ ಕಪಾಳಕ್ಕೆ ಹೊಡೆದಿದ್ದಾರೆ.
ಇದೇ ರೀತಿ ಮಾಜಿ ಹಾಸ್ಯ ಕಲಾವಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಈಗ ಆತಂಕದಲ್ಲಿಯೇ ಇದ್ದಾರೆ ಎಂದು ಪರೇಶ್ ರಾವಲ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
PublicNext
29/03/2022 05:33 pm