ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಮ್ಮುಟ್ಟಿ ಮೆಚ್ಚಿದ ವಿಜಯ್ ತಲೆದಂಡ ಸಿನಿಮಾ

ಬೆಂಗಳೂರು:ಕನ್ನಡದ ವಿಶೇಷ ನಾಯಕ ನಟ ಸಂಚಾರಿ ವಿಜಯ್ ಅಭಿನಯದ ತಲೆದಂಡ ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಈ ಚಿತ್ರ ಈಗಾಗಲೇ ಹಲವು ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದೆ. ಇಂತಹ ಚಿತ್ರದ ಬಗ್ಗೆ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು. ಮಮ್ಮುಟ್ಟಿ ವಿಶೇಷವಾಗಿಯೇ ಈ ಚಿತ್ರದ ನಟ ಸಂಚಾರಿ ವಿಜಯ್ ಬಗ್ಗೆ ಹೇಳಿಕೊಂಡಿದ್ದಾರೆ.ವಿಜಯ್ ಮತ್ತು ನಾನು ಹೈದ್ರಾಬಾದ್‌ನ ಒಂದು ಅವಾರ್ಡ್ ಫಂಕ್ಷನ್‌ನಲ್ಲಿ ಮೀಟ್ ಆಗಿದ್ದೇವು. ಅಲ್ಲಿ ಪರಸ್ಪರ ಮಾತನಾಡಿದ್ದೇವು.ತುಂಬಾ ವಿಶೇಷವಾದ ವ್ಯಕ್ತಿ ಸಂಚಾರಿ ವಿಜಯ್. ಒಳ್ಳೆಯ ಕಥೆಗಳನ್ನೇ ಒಪ್ಪಿಕೊಂಡು ಸಿನಿಮಾ ಮಾಡಿದ್ದಾರೆ.

ವಿಜಯ್ ಇಲ್ಲ ಅಂತ ಅನಿಸೋದೇ ಇಲ್ಲ.ಅದ್ಭುತ ಅಭಿನಯದ ಮೂಲಕ ಇನ್ನೂ ಜನರ ಮನಸ್ಸಿನಲ್ಲಿಯೇ ಇದ್ದಾರೆ ಅಂತಲೇ ಫೇಸ್ ಬುಕ್‌ನಲ್ಲಿ ಮಮುಟ್ಟಿ ಬರೆದುಕೊಂಡಿದ್ದಾರೆ.

Edited By :
PublicNext

PublicNext

26/03/2022 10:23 pm

Cinque Terre

22.65 K

Cinque Terre

0