ನಿತ್ಯ ಫ್ಯಾಷನ್ ಗಾಗಿ ಹೊಸ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ನಾವು ನೀವೆಲ್ಲಾ ನೋಡಿರುತ್ತೇವೆ. ಇದು ಫ್ಯಾಷನಲ್ ಬದಲಾವಣೆಗಳನ್ನು ಸ್ವಾಗತಿಸಲೇಬೇಕು. ಕೆಲವರು ಫ್ಯಾಷನ್ ಹೆಸರಿನಲ್ಲಿ ವಿಚಿತ್ರವಾಗಿರೋ ಡ್ರೆಸ್ ಧರಿಸೋದಂತೂ ಯಾವತ್ತೋ ಟ್ರೆಂಡ್ ಆಗಿದೆ. ಈಗೆಲ್ಲಾ ಯಾವ ಥರ ಡ್ರೆಸ್ ಮಾಡಿದ್ರೂ ಅದು ಫ್ಯಾಷನ್ .
ಬೆನ್ನು ತೋರಿಸೋ ಬಟ್ಟೆ, ಹರಿದ ಬಟ್ಟೆ, ಹಳೆ ಬಟ್ಟೆ ಏನು ಹಾಕ್ಕೊಂಡು ಬಂದ್ರೂ ಒಟ್ಟಾರೆ ಲೇಟೆಸ್ಟ್ ಫ್ಯಾಷನ್ ಅಂತಾರೆ. ಈಗ ಹಾಲಿವುಡ್ ತಾರೆ ಕಿಮ್ ಕರ್ದಾಶಿಯನ್ ಈ ಬಾರಿ ತಮ್ಮ ಮೈ ತುಂಬಾ ಟೇಪ್ ಸುತ್ತಿಕೊಂಡು, ಅದನ್ನೇ ಡ್ರೆಸ್ ಆಗಿ ಮಾಡಿಕೊಂಡು ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ.
ಕಿಮ್ ಕರ್ದಾಶಿಯನ್ ವಿಚಿತ್ರ ಅವತಾರವನ್ನು ಜನರು ಕಣ್ಣು ಮಿಟುಕಿಸದೆ ನೋಡಿದ್ದಂತೂ ಸುಳ್ಳಲ್ಲ.
PublicNext
09/03/2022 10:33 pm