ನವರಸ ನಾಯಕ ಜಗ್ಗೇಶ್ ಹಾಗೂ ನಟಿ ಅದಿತಿ ಪ್ರಭುದೇವ ಹೆಜ್ಜೆ ಹಾಕಿರುವ 'ತೋತಾಪುರಿ' ಸಿನಿಮಾದ 'ಬಾಗ್ಲು ತೆಗಿ ಮೇರಿ ಜಾನ್' ಹಾಡು ಜನಮನ ಗೆದ್ದಿದೆ. ಈ ಹಾಡಿನಿಂದಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಯೂಟ್ಯೂಬ್ನಲ್ಲಿ ಈ ಹಾಡನ್ನು ಸಿನಿಪ್ರಿಯರು ಈವರೆಗೆ (ಫೆ.4ರ ಸಂಜೆ 5:20 ಗಂಟೆವರೆಗೆ) 3.83 ಮಿಲಿಯನ್, ಅಂದರೆ 38 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಿದ್ದಾರೆ. ಇದು ತಂಡದ ಸಂತಸಕ್ಕೆ ಕಾರಣ ಆಗಿದೆ.
'ಬಾಗ್ಲು ತೆಗಿ ಮೇರಿ ಜಾನ್' ಹಾಡಿಗೆ ವಿಜಯ್ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ಹಾಡು ಸಖತ್ ತಮಾಷೆಯಾಗಿ ಮೂಡಿಬಂದಿದೆ. ವ್ಯಾಸರಾಜ್ ಸೋಸಲೆ, ಅನನ್ಯಾ ಭಟ್ ಮತ್ತು ಸುಪ್ರಿಯಾ ರಾಮ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಜಗ್ಗೇಶ್ ಅಭಿಮಾನಿಗಳಂತೂ ಈ ಗೀತೆಯಲ್ಲಿ ಸಖತ್ ಮೆಚ್ಚಿಕೊಂಡಿದ್ದಾರೆ.
PublicNext
04/02/2022 05:38 pm