ಬೆಂಗಳೂರು:ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ಮೊದಲ ಸಾಂಗ್ ಟೀಸರ್ ರಿಲೀಸ್ ಆಗಿದೆ. ಅನೂಪ್ ಸೀಳಿನ್ ಸಂಗೀತಕ್ಕೆ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅದೇ ಹಾಡು ಈಗ ಸೂಪರ್ ಆಗಿಯೇ ಗಮನ ಸೆಳೆಯುತ್ತಿದೆ.
ತೋತಾಪುರಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ. ಎರಡು ಭಾಗದಲ್ಲಿ ಬರ್ತಿರೋ ಈ ಚಿತ್ರದಲ್ಲಿ ವಿಶೇಷವಾದ ಕಂಟೆಂಟ್ ಇದೆ. ಹಾಗಂತ ಈಗಾಗಲೇ ಬಿಟ್ಟಿರೋ ಫೋಸ್ಟರ್ ಮತ್ತು ಇತರ ವೀಡಿಯೋಗಳು ಹೇಳುತ್ತಿವೆ.
ಈಗ ಹೊರ ಬಿಟ್ಟಿರೋ ಸಾಂಗ್ ಟೀಸರ್ ಇದೆ ನೋಡಿ, ಇದರಲ್ಲಿ ಬಾಲಿವುಡ್ ನ ಕರ್ಜ್ ಚಿತ್ರದ ಹಿಟ್ ಹಾಡಿನ ಸಾಲುಗಳನ್ನ ಬಳಸಿಕೊಳ್ಳಲಾಗಿದೆ. ಅದಕ್ಕೆ ಹಾಸ್ಯದ ಟಚ್ ಕೂಡ ಇಲ್ಲಿ ಕೊಡಲಾಗಿದೆ.
ಉಳಿದಂತೆ ಈ ಚಿತ್ರದ ಇಡೀ ಹಾಡನ್ನ ಚಿತ್ರ ತಂಡ ಶೀಘ್ರದಲ್ಲಿಯೇ ರಿಲೀಸ್ ಮಾಡೋ ಪ್ಲಾನ್ ಮಾಡಿದೆ. ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್ ಕೂಡ ಚಿತ್ರದ ರಿಲೀಸ್ ಪ್ಲಾನ್ ನಲ್ಲಿಯೇ ಇದ್ದಾರೆ.
PublicNext
24/01/2022 03:54 pm