ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯಸಿದ್ದ ಜೇಮ್ಸ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಪುನೀತ್ ಇಲ್ಲದೇ ಪೂರ್ಣಗೊಂಡ ಈ ಚಿತ್ರದ ಕೊನೆ ದಿನ ಒಂದು ವಿಶೇಷ ಫೋಟೋ ಕೂಡ ತೆಗೆಸಿಕೊಳ್ಳಲಾಗಿದೆ. ಆ ಫೋಟೋದಲ್ಲಿ ಯಾರೆಲ್ಲ ಇದ್ದರು ಗೊತ್ತೇ ? ಬನ್ನಿ ಹೇಳ್ತೀವಿ.
ಜೇಮ್ಸ್ ಚಿತ್ರದ ಬಹುತೇಕ ಕೆಲಸವನ್ನ ಪುನೀತ್ ಮುಗಿಸಿಕೊಟ್ಟೇ ಹೋಗಿದ್ದಾರೆ. ಆದರೂ ಚಿತ್ರದ ಒಂದಷ್ಟು ಕೆಲಸ ಬಾಕಿ ಇತ್ತು. ಅದನ್ನ ನಿರ್ದೇಶಕ ಚೇತನ್ ಈಗ ಪೂರ್ಣಗೊಳಿಸಿದ್ದಾರೆ.
ವಿಶೇಷ ಅಂದ್ರೆ ಚಿತ್ರದ ಕೊನೆ ದಿನದ ಚಿತ್ರೀಕರಣದಲ್ಲಿ ರಾಘವೇಂದ್ರ ರಾಜಕುಮಾರ್,ಯುವರಾಜಕುಮಾರ್ ಸೇರಿದಂತೆ ಅನೇಕ ಕಲಾವಿದರೂ ಈ ವೇಳೆ ಇದ್ದರು. ಈ ಒಂದು ವಿಶೇಷ ಕ್ಷಣ ಈಗ ಫೋಟೋದಲ್ಲೂ ಕ್ಯಾಪ್ಚರ್ ಆಗಿದೆ. ಅದೇ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
PublicNext
21/01/2022 10:15 pm