ಮುಂಬೈ:ಬಾಲಿವುಡ್‌ನ ನಟ ಶಾಹೀದ್ ಕಪೂರ್ ಅಭಿನಯದ ಜರ್ಸಿ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ. ಕೋವಿಡ್ ಕಾರಣದಿಂದಲೇ ಸಿನಿಮಾ ಈಗ ಈ ನಿರ್ಧಾರ ತೆಗೆದುಕೊಂಡಿದೆ.
ಕೋವಿಡ್ ರೂಪಾಂತರಿ ಒಮಿಕ್ರಾನ್ ಕೇಸ್ ಹೆಚ್ಚಾಗುತ್ತಲೇ ಇದೆ. ಕೆಲವು ರಾಜ್ಯಗಳಲ್ಲಿ ಥಿಯೇಟರ್ ಮತ್ತು ಮಾಲ್ ಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಇದನ್ನೆಲ್ಲ ತಿಳಿದುಕೊಂಡೇ ಚಿತ್ರದ ದಿಲ್ ರಾಜು ಚಿತ್ರದ ರಿಲೀಸ್ ಡೇಟ್ ಮುಂದೆ ಹಾಕಿದ್ದಾರೆ. ಈ ವರ್ಷದ ಕೊನೆ ಡಿಸೆಂಬರ್-31 ರಂದು ಕ್ರಿಕೆಟ್ ಆಧರಿಸಿರೋ ಜರ್ಸಿ ಚಿತ್ರ ರಿಲೀಸ್ ಆಗೋದಿತ್ತು.
ಆದರೆ ಬದಲಾದ ಡೇಟ್ ಯಾವಾಗ ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದರೆ ಶಾಹೀದ್ ಅಭಿಮಾನಿಗಳಿಗೆ ನಿರ್ಮಾಪಕರು ತಮ್ಮ ಈ ನಿರ್ಧಾರವನ್ನ ಈಗಾಗಲೇ ಹೇಳಿಕೊಂಡಿದ್ದಾರೆ. ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರ ತೆಲುಗುವಿನ ಜರ್ಸಿ ಚಿತ್ರದ ರಿಮೇಕ್ ಆಗಿದೆ.
PublicNext
29/12/2021 11:05 am