ಉತ್ತಮ ಡ್ರಸ್ ಮಾಡಿಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುವ ಟ್ರೆಂಡ್ ಇತ್ತೀಚೆಗೆ ಸಾಮಾನ್ಯವಾಗಿದೆ.
ಈ ರೂಢಿ ನಟಿ ಮಣಿಯರಲ್ಲಿ ಸ್ವಲ್ಪ ಜಾಸ್ತಿ..ಸದ್ಯ ಇಲ್ಲೊಬ್ಬ ನಟಿ ತನ್ನ ಫೋಟೋಶೂಟ್ ಬಳಿಕ ಇನ್ ಸ್ಟಾ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ವ್ಯಕ್ತಿಯೋರ್ವ ಏನಮ್ಮಾ ನಿನಗೆ ಬಟ್ಟೆ ಬೇಕಾ?.. ಸದ್ಯ ಹಾಕಿರುವ ಬಟ್ಟೆಯನ್ನು ಹಾಕೋಬೇಡಿ ಹಾಗೇ ಓಡಾಡಿ. ಮೊದಲೇ ತುಂಡು ಬಟ್ಟೆ ಅದನ್ನು ಕಿತ್ತು ಬಿಸಾಕಿ’ ಎಂದು ಕಮೆಂಟ್ ಮಾಡಿದ್ದಾನೆ.
ಬಿಗ್ ಬಾಸ್ OTT ಸ್ಪರ್ಧಿಗಳಲ್ಲಿ ಒಬ್ಬರಾದ ಕಿರುತೆರೆ ನಟಿ ಉರ್ಫಿ ಜಾವೇದ್ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಇವರು ಶೇರ್ ಮಾಡುವ ಪ್ರತಿ ಫೋಟೋಗಳು ಟ್ರೋಲಿಗರಿಗೆ ಆಹಾರವಾಗುತ್ತವೆ.
ಸದಾ ಡಿಫ್ರೆಂಟ್ ಆಗಿ ಉಡುಪು ಧರಿಸಿವ ಉರ್ಫಿ, ಈ ವಿಷಯದಿಂದಲೇ ಫುಲ್ ಫೇಮಸ್ ಆಗಿದ್ದಾರೆ. ಈ ನಟಿ ಕೂಡ ಕೆಲವೊಮ್ಮೆ ವಿಚಿತ್ರ ಬಟ್ಟೆಗಳನ್ನು ಧರಿಸಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ.
24 ವರ್ಷದ ಉರ್ಫಿ ‘ಬಡೆ ಭಯ್ಯಾ ಕಿ ದುಲ್ಹನಿಯಾ' ಮೂಲಕ ಟಿವಿಗೆ ಎಂಟ್ರಿ ಕೊಟ್ಟರು. ನಂತರ ಬೇಪನ್ನಾಹ್, ಮೇರಿ ದುರ್ಗಾ ಮತ್ತು ಪಂಚ್ ಬೀಟ್ ಸೀಸನ್ 2 ಗಳಲ್ಲಿ ಕಾಣಿಸಿಕೊಂಡರು.
PublicNext
22/12/2021 05:44 pm