ಬೆಂಗಳೂರು:ಕರ್ನಾಟಕ ಕ್ರಶ್ ಎಂದೇ ಖ್ಯಾತಿ ಆಗಿದ್ದ ರಶ್ಮಿಕಾ ಮಂದಣ್ಣ ಕನ್ನಡವನ್ನೇ ಮರೆತು ಬಿಟ್ಟರೇ ? ಎಂದು ಈಗ ಎಲ್ಲರೂ ಕೇಳುವಂತೆ ಆಗಿದೆ. ಕಾರಣ, ರಶ್ಮಿಕಾ ಮಂದಣ್ಣ ಪುಷ್ಪ ಚಿತ್ರದ ಪ್ರೆಸ್ ಮೀಟ್ ನಲ್ಲಿ ಕನ್ನಡ ಬಿಟ್ಟು ಎಲ್ಲ ಭಾಷೆಯಲ್ಲೂ ಮಾತನಾಡಿ ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿ ಆಗುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪುಷ್ಪ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಎಂದಿನಂತೆ ಇಂಗ್ಲೀಷು, ತೆಲುಗು ಹೀಗೆ ಎರಡೂ ಭಾಷೆಯಲ್ಲಿ ಮಾತನಾಡಿದ್ದಾರೆ.ಇದಕ್ಕೆ ಕಾರಣ ಸ್ವತಃ ರಶ್ಮಿಕಾನೇ ಕೊಟ್ಟಿದ್ದಾರೆ.
ಬಹು ದಿನಗಳ ಬಳಿಕ ನಾನು ಬೆಂಗಳೂರಿಗೆ ಬಂದಿದ್ದೇನೆ. ನನ್ನೂರು ಕೊಡಗಿಗೂ ಹೋಗಿಯೇ ಇಲ್ಲ. ಹೀಗಾಗಿ ಕನ್ನಡ ಮರೆತಂದಾಗಿದೆ. ಮಾತಿನ ಮಧ್ಯೆ ಬೇರೆ ಬೇರೆ ಭಾಷೆನೇ ಬರುತ್ತಿದೆ ಅಂತಲೇ ಹೇಳಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.
PublicNext
15/12/2021 08:00 pm