ವಿಚ್ಛೇದನದ ಬಳಿಕ ಮೊದಲ ಬಾರಿ ಐಟಂ ಹಾಡೊಂದಕ್ಕೆ ಸೊಂಟ ಬಳುಕಿಸಿದ್ದ ನಟಿ ಸಮಂತಾ ಬಾರಿ ಹವಾ ಮಾಡುತ್ತಿದ್ದಾರೆ. ಜೊತೆಗೆ ಪಡ್ಡೆ ಹುಡುಗರ ನಿದ್ದೆ ಕದಿರುವ ನಟಿ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಎಲ್ಲೆಲ್ಲೂ ಸಮಂತಾ ಅವರದ್ದೇ ಹವಾ. ‘ಪುಷ್ಪ’ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿರುವ ‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿನ ಲಿರಿಕಲ್ ವಿಡಿಯೋ ಸಖತ್ ಹಿಟ್ ಆಗಿದೆ.
ರಿಲೀಸ್ ಆಗಿ ಒಂದು ದಿನ ಕಳೆಯುವುದರೊಳಗೆ 10 ಮಿಲಿಯನ್ (1 ಕೋಟಿಗೂ) ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇದರಿಂದಾಗಿ ‘ಪುಷ್ಪ’ ಸಿನಿಮಾದ ಹವಾ ಹೆಚ್ಚಾಗಿದೆ. ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ವಿಡಿಯೋ ಸಾಂಗ್ ನಲ್ಲಿ ಸಮಂತಾ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ.
ಈ ಹಾಡಿಗೆ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
PublicNext
13/12/2021 04:05 pm