ಅಭಿಮಾನಿಗಳ ಅಸಭ್ಯ ವರ್ತನೆಯಿಂದ ಬಾಲಿವುಡ್ ನಟಿ ಮೌನಿ ರಾಯ್ ಮುಜುಗರಕ್ಕೀಡಾದ ಘಟನೆ ಮುಂಬೈನ ಜುಹು ಸ್ಟುಡಿಯೋದ ಬಳಿ ನಡೆದಿದೆ. ರೆಕಾರ್ಡಿಂಗ್ ಸ್ಟುಡಿಯೋದಿಂದ ಮೌನಿರಾಯ್ ಹೊರಬರ್ತಿದ್ದ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಕೆಲವರು ಮೌನಿಯನ್ನ ಮುಟ್ಟಲು ಮುಂದಾದ್ರು. ಘಟನೆಯಿಂದ ಗಲಿಬಿಲಿಗೊಂಡ ಮೌನಿ ತಕ್ಷಣ ಜನರ ಗುಂಪಿನಿಂದ ಹೊರನಡೆದ್ರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೌನಿ ಪರ ಕಮೆಂಟ್ಸ್ ಮಾಡಿದ್ದಾರೆ.
ಸೆಲೆಬ್ರಿಟಿಗಳೂ ನಮ್ಮಂತೆ ಮನುಷ್ಯರೇ. ಅವರಿಗೆ ಗೌರವ ಕೊಡಿ. ಅವರ ಖಾಸಗೀತನಕ್ಕೆ ಧಕ್ಕೆ ಮಾಡಬೇಡಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
PublicNext
10/12/2021 04:11 pm