ಮುಂಬೈ:ಸ್ಟ್ಯಾಂಡ್‌ಅಪ್ ಕಾಮಿಡಿಯನ್ ವೀರ್ ದಾಸ್ ಹಾಸ್ಯಕ್ಕೆ ನಗದವರೇ ಇಲ್ಲ. ಆದರೆ ಈ ಕಾಮಿಡಿಯನ್ ಮಾಡಿದ ಸೀರಿಯೆಸ್ ಕಾಮಿಡಿ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿರೋ ಕೆಟ್ಟ ವಿಚಾರ ಮತ್ತು ಒಳ್ಳೆಯ ವಿಚಾರದ ಮೇಲೇನೆ ವೀರ್ ದಾಸ್ ವಿಡಂಬನೆ ಮಾಡಿದ್ದರು.ಅದುವೇ ಈಗ ವೈರಲ್ ಆಗಿದೆ. ವಿವಾದಕ್ಕೂ ಕಾರಣ ಆಗಿದೆ.
ವೀರ್ ದಾಸ್ ಹಾಸ್ಯದಲ್ಲಿ ವಿಷಯ ಇರ್ತದೋ ಇಲ್ಲವೋ ಗೊತ್ತಿಲ್ಲ.ಆದರೆ ನಗುವ ಮನಸ್ಸಿದ್ದವರು ವೀರ್ ದಾಸ್ ವಿಡಂಬನೆ ನಕ್ಕು ಬಿಡ್ತಾರೆ. ಅದಕ್ಕೇನೆ ನಾನು ಇರೋದು ನಗಿಸೋದೇ ನನ್ನ ಧರ್ಮ ಅನ್ನೋ ಅರ್ಥದಲ್ಲಿಯೇ ವೀರ್ ದಾಸ್ ಮಾತನಾಡುತ್ತಾರೆ.
ಆದರೆ TWO INDIAS ಅನ್ನೋ ಪರಿಕಲ್ಪನೆಯ ಹಾಸ್ಯ ಈಗ ವೀರ್ ದಾಸ್ ಗೆ ನುಂಗಲಾರದ ತುತ್ತಾಗಿದೆ.ಭಾರತದ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನ ಇಟ್ಟುಕೊಂಡೇ ವೀರ್ ದಾಸ್ ಕಾಮಿಡಿ ಮಾಡಿದ್ದಾರೆ.
ಆದರೆ ಇದನ್ನ ನೋಡಿದ ಕೆಲವರು ಭಾರತವನ್ನ ಹಾಸ್ಯದ ಮೂಲಕವೇ ಅವಮಾನಿಸಿದ್ದಾರೆ ಎಂದು ಸಿಟ್ಟಾಗಿದ್ದಾರೆ. ಮನಸ್ಸಿಗೆ ಬಂದಂತೆ ಟೀಕಿಸಿಯೂ ಇದ್ದಾರೆ. ಇದನ್ನ ನೋಡಿದ ವೀರ್ ದಾಸ್, ಜನರನ್ನ ನಗಿಸೋದು ನನ್ನ ಕೆಲಸ.ನಿಮಗೆ ನನ್ನ ಹಾಸ್ಯದಲ್ಲಿ ನಗು ಬರದೇ ಇದ್ದರೇ ನಗಲೇ ಬೇಡಿ ಅಂತಲೇ ರಿಯಾಕ್ಟ್ ಮಾಡಿದ್ದಾರೆ. ಆದರೂ ವೀರ್ ದಾಸ್ ಮೇಲೆ ಟೀಕಾ ಪ್ರಹಾರ ನಡೀತಾನೇ ಇದೆ.
PublicNext
22/11/2021 05:01 pm