ಅಪ್ಪುಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಸುಮಾರು 140ಕ್ಕೂ ಅಧಿಕ ಮಂದಿ ಕಲಾವಿದರಿಗೆ ಆಹ್ವಾನ ನೀಡಲಾಗಿತ್ತು. ಇದೇ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಬಂದ ನಟ ದರ್ಶನ್ ಅವರನ್ನು ತಡೆದ ಪೊಲೀಸ್ ಪಾಸ್ ಇಲ್ಲದೆ ಒಳಗಡೆ ಬಿಡಲ್ಲ ಎಂದು ಕೆಲ ಕಾಲ ಹೊರಗಡೆಯೇ ನಿಲ್ಲಿಸಿದ್ದಾರೆ.
ಇಂದೇಕೊ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಕೊಟ್ಟಿದ್ದ ಪಾಸ್ ಮರೆತು ಬಂದಿದ್ದರು. ಈ ಕಾರಣಕ್ಕೆ ಕೆಲ ಹೊತ್ತು ಪೊಲೀಸರು ದರ್ಶನ್ರನ್ನು ತಡೆದು ನಿಲ್ಲಿಸಿದ್ದರು. ದರ್ಶನ್ ಅದೆಷ್ಟೇ ಪರಿಯಾಗಿ ಬೇಡಿಕೊಂಡರೂ ಒಳಗೆ ಬಿಟ್ಟಿರಲಿಲ್ಲ.
ಇನ್ನು ಪಾಸ್ ಇದ್ದವರಿಗೆ ಮಾತ್ರ ಕೂರಲು ಅವಕಾಶವಿದೆ. ಹಾಗಾಗಿ ಪಾಸ್ ಇದ್ದರೆ ಮಾತ್ರ ಒಳಗೆ ಪ್ರವೇಶ ಎಂದು ಪೊಲೀಸ್ ಪಟ್ಟು ಹಿಡಿದಿದ್ದರು. ಈ ವೇಳೆ ಸರಳ ವ್ಯಕ್ತಿತ್ವದ ವ್ಯಕ್ತಿ ದರ್ಶನ್ ಒಳಗೆ ಕೂರಲು ಅವಕಾಶ ಇಲ್ಲದೆ ಇದ್ದರೂ ಪರವಾಗಿಲ್ಲ. ನಿಂತುಕೊಂಡೇ ಕಾರ್ಯಕ್ರಮ ನೋಡುತ್ತೇವೆ. ಕುಡಿಯಲು ನೀರು ಸಿಗದೆ ಇದ್ದರೂ ಪರವಾಗಿಲ್ಲ ಎಂದು ಮನವಿ ಮಾಡಿಕೊಂಡ ಬಳಿಕ ಪೊಲೀಸ್ ಒಳಗೆ ಬಿಟ್ಟ ಘಟನೆ ನಡೆದಿದೆ.
PublicNext
16/11/2021 10:18 pm