ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಶ್ಮಿಕಾ ಮಂದಣ್ಣಗೆ ಶರ್ಟ್‌ಲೆಸ್ ಹುಡ್ಗರನ್ನ ಕಂಡ್ರೆ ಏನ್ ಆಗ್ತದೆ ಗೊತ್ತೇ ?

ಕನ್ನಡದ ಕ್ರಶ್ ಆಗಿದ್ದ ರಶ್ಮಿಕಾ ಮಂದಣ್ಣ ಈಗ ಬಹು ಭಾಷೆಗಳಲ್ಲಿಯೇ ಮಿಂಚುತ್ತಿದ್ದಾರೆ. ಆದರೆ ಇವರಿಗೆ ಶರ್ಟ್ ಲೆಸ್ ಹುಡುಗರನ್ನ ಕಂಡ್ರೆ ಆಗೋದೇ ಇಲ್ಲಂತೆ.ಹಾಗಂತ ನಾವೇ ಇದನ್ನ ಹೇಳುತ್ತಿಲ್ಲ. ಸ್ವತಃ ರಶ್ಮಿಕಾ ಮಂದಣ್ಣ ಇದನ್ನ ಹೇಳಿಕೊಂಡು ವೈರಲ್ ಆಗುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಟಿಂಡರ್ ಡೇಟಿಂಗ್ ಆ್ಯಪ್ ಟಾಕ್ ಶೋದಲ್ಲಿ ರಶ್ಮಿಕಾ ಓಪನ್ ಆಗಿಯೇ ಮಾತನಾಡಿದ್ದಾರೆ. ಇದಲ್ಲಿ ಕೇಳಿದ ಡೇಟಿಂಗ್ ಕುರಿತು ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದ್ದಾರೆ. ನಾನು ಬೋರ್ಡಿಂಗ್ ಸ್ಕೂಲ್ ನಲ್ಲಿಯೇ ಓದಿರೋದು. ಇಲ್ಲಿ ಹುಡುಗರನ್ನ ಕಣ್ಣೆತ್ತಿ ನೋಡಿದರೂ ಡೇಟಿಂಗ್ ಗಾಸಿಪ್ ಎದ್ದು ಬಿಡುತ್ತಿದ್ದವು ಎಂದಿದ್ದಾರೆ ರಶ್ಮಿಕಾ.

ಡೇಟಿಂಗ್ ಆ್ಯಪ್ ನಲ್ಲಿ ಹುಡುಗರು ಅಪ್‌ಲೋಡ್ ಮಾಡುವ ಫೋಟೋ ಬಗ್ಗೆನೂ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ರಶ್ಮಿಕಾ ಮಂದಣ್ಣ,ನನಗೆ ವರ್ಕೌಟ್ ಮಾಡಿ ಬಾಡಿ ಫಿಟ್ ಆಗಿರೋ ಹುಡುಗರು ಕಂಡ್ರೆನೇ ಹೆಚ್ಚು ಇಷ್ಟ.ಆದರೆ ಶರ್ಟ್ ಲೆಸ್ ಫೊಟೋ ಹಾಕೋ ಹುಡುಗರು ಅಂದ್ರೇ ಕಷ್ಟ ಕಷ್ಟ.ಅದನ್ನ ನೋಡಲು ಇಷ್ಟಪಡೋದಿಲ್ಲ ಅಂದಿದ್ದಾರೆ.ರಶ್ಮಿಕಾ ಈ ಒಂದು ಮಾತು ಈಗ ಹೆಚ್ಚು ಹೈಲೈಟ್ ಆಗುತ್ತಿದೆ ಅಷ್ಟೆ.

Edited By :
PublicNext

PublicNext

15/11/2021 05:13 pm

Cinque Terre

26.66 K

Cinque Terre

4

ಸಂಬಂಧಿತ ಸುದ್ದಿ