ದಾವಣಗೆರೆ: ಪುನೀತ್ ಸಾವಿನ ನಂತರ ಜಿಮ್ ಹೋಗುವ ಜನರ ಸಂಖ್ಯೆ ಕಡಿಮೆ ಆಗಿದೆ. ಈ ಬಗ್ಗೆ ದಾವಣಗೆರೆಯಲ್ಲಿ ರಮೇಶ್ ಅರವಿಂದ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ.ನೀವೇ ನೋಡಿ.
ಅಪ್ಪು ನಿಧನ ಅದೊಂದು ದೊಡ್ಡ ಶಾಕ್.ಅಪ್ಪು ಸಾವಿಗೂ ಜಿಮ್‌ಗೂ ಏನೂ ಸಂಬಂಧವಿಲ್ಲ ಎಂದು ನಾಯಕ ನಟ ರಮೇಶ್ ಅರವಿಂದ್ ಹೇಳಿದ್ದಾರೆ.
ಅಪ್ಪು ಮರಣಾನಂತರ ಜಿಮ್ ಹೋಗುವರ ಸಂಖ್ಯೆ ಕಡಿಮೆಯಾಗಿದೆಯಂತೆ.ಹಲವು ಜಿಮ್ ಮಾಲೀಕರು ನಮ್ಮೊಂದಿಗೆ ಹೇಳಿಕೊಂಡಿದ್ದಾರೆ.
ನಮ್ಮ ಕನಸುಗಳನ್ನು ಈಡೇರಿಸುವ ಸಾಧನ ನಮ್ಮ ದೇಹ. ಆ ದೇಹವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ.ಆರೋಗ್ಯವಂತ ದೇಹಕ್ಕಾಗಿ ಜಿಮ್‌ಗೆ ಹೋಗಬೇಕಾದ ಅಗತ್ಯವಿಲ್ಲ.ಸರಳವಾದ ಎಕ್ಸಸೈಜ್ ಮಾಡಿದ್ರೂ ಸಾಕು.ಎಲ್ಲರೂ ದೇಹದ ಆರೋಗ್ಯ ಕಾಪಾಡಿಕೊಂಡರೆ ಒಳ್ಳೆಯದು ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.
PublicNext
11/11/2021 09:47 am