ಶ್ರೀರಂಗಪಟ್ಟಣ:ಪುನೀತ್ ರಾಜಕುಮಾರ್ 11 ನೇ ದಿನದ ಕಾರ್ಯ ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ನಡೆಯುತ್ತಿದೆ. ಸಿನಿಮಾ ಗಣ್ಯರು, ಕಲಾವಿದರು ಇಲ್ಲಿ ಗೆ ಬಂದು ಹೋಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವ್ರೂ ಕೂಡ ಬಂದು ಪುನೀತ್ ಕಾರ್ಯದಲ್ಲಿ ಭಾಗಿ ಆಗಿದ್ದರು. ಆದರೆ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್,ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಪುನೀತ್ ಮೋಕ್ಷಕ್ಕಾಗಿಯೇ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹೌದು. ಪುನೀತ್ ಆತ್ಮಕ್ಕೆ ಮೋಕ್ಷ ಸಿಗಲೆಂದೇ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಈಗ ಶ್ರೀರಂಗಪಟ್ಟಣದ ಗಂಜಾಂ ಬಳಿ ವೈದಿಕ ಕಾರ್ಯ ಮಾಡಿದ್ದಾರೆ. ಅದರಲ್ಲಿ ಆಶ್ಲೇಷ ಬಲಿ ಮತ್ತು ನಾರಾಯಣ ಬಲಿ ಪೂಜೆ ಮಾಡಿಸಿದ್ದಾರೆ. ಕಾವೇರಿ ಸಂಗಮದಲ್ಲೂ ತರ್ಪಣ ಬಿಟ್ಟಿದ್ದಾರೆ.
PublicNext
08/11/2021 05:19 pm