ಮಂಡ್ಯ: ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಸಾವಿಗೆ ಜಿಮ್ ಕಾರಣ ಎಂದು ಹಬ್ಬಿಸಿದ್ದಾರೆ. ಇದ್ರಿಂದ ಜಿಮ್ ನಲ್ಲಿ ವರ್ಕೌಟ್ ಮಾಡುವವರಿಗೆ ಆತಂಕ ಶುರುವಾಗಿದೆ. ಬಹುತೇಕ ನಗರಗಳಲ್ಲಿ ಜಿಮ್ ಅಡ್ಮಿಷನ್ 90% ಕಡಿಮೆಯಾಗಿದೆ. ಈ ರೀತಿಯಾಗಿ ಜಿಮ್ ಬಗ್ಗೆ ತಪ್ಪು ಕಲ್ಪನೆ ಸರಿಯಲ್ಲ ಎಂದು ಪ್ರೇಮಂ ಪೂಜ್ಯಂ ಚಿತ್ರ ಪ್ರೊಮೋಷನ್ ಗೆ ಬಂದಿದ್ದ ವೇಳೆ ನಟ ಪ್ರೇಮ್ ಮಾತನಾಡಿದ್ದಾರೆ.
ಅಪ್ಪು ಸರ್ ತೀರಿಕೊಂಡ ಮೇಲೆ ಹಲವು ಕಾಲ್ ಬಂದ್ವು, ಜಿಮ್ ಮಾಡೋದನ್ನ ಬಿಟ್ಟು ಬಿಡಿ ಎಂದು.ನನಗೆ, ನನ್ನ ಫ್ಯಾಮಿಲಿಗೆ ಆತ್ಮೀಯವಾದ ಗೆಳೆಯ ಅಪ್ಪು
ನನ್ನ ಮಕ್ಕಳ ಹುಟ್ಟುಹಬ್ಬದ ದಿನ ನೆನಪಿಟ್ಟುಕೊಂಡು ಫೋನ್ ಮಾಡ್ತಿದ್ರು. ಬಹಳ ಆತ್ಮೀಯ ಗೆಳೆಯ ಇಲ್ಲದಿರೋದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಕನ್ನಡ ಇಂಡಸ್ಟ್ರಿಯು ದೊಡ್ಡ ಆಸ್ತಿಯನ್ನ ಕಳೆದುಕೊಂಡಿದೆ ಎಂದು ಅಪ್ಪುವನ್ನು ನೆನೆದು ಭಾವುಕರಾದರು ನಟ ಪ್ರೇಮ್.
PublicNext
06/11/2021 04:36 pm