ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಮನೆಯ "ಪ್ರೇಮದ ಕಾಣಿಕೆ" ಕಣ್ಮರೆ : ಮಣ್ಣಲ್ಲಿ ಮಣ್ಣಾಗಲಿರುವ ಯುವರತ್ನ

ಬೆಂಗಳೂರು : ಎರಡು ದಿನಗಳ ಹಿಂದೆ ನಮ್ಮನಗಲಿದ ದೃವತಾರೆ ಅಪ್ಪು ಇನ್ನೇನು ಕೆಲವೇ ಕ್ಷಣಗಳಲ್ಲಿ ಮಣ್ಣಲ್ಲಿ ಮಣ್ಣಾಗಲಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಇಂದು ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಈಗಾಗಲೇ ಅವರ ಪಾರ್ಥಿವ ಶರೀರ ರಾಜ್ ಕುಮಾರ್ ಸಮಾಧಿ ತಲುಪಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಇನ್ನು ತಾಯಿ ಪಕ್ಕದಲ್ಲೆ ಚಿರನಿದ್ರೆಗೆ ಜಾರಲಿರುವ ತಾಯಿಗೆ ತಕ್ಕ ಮಗ ಚಟ್ಟಕ್ಕೆ ಶ್ರೀಮುರುಳಿ,ರಾಕ್ಲೈನ್ ವೆಂಕಟೇಶ್, ವಿಜಯರಾಘವೇಂದ್ರ, ಗುರು ರಾಘವೇಂದ್ರ ರಾಜಕುಮಾರ್ ಹೆಗರಲು ಕೊಟ್ಟಿದ್ದಾರೆ.

ಕಂಠೀರವ ಸ್ಟುಡಿಯೋ ಹೊರಗೆ ರಸ್ತೆಯಲ್ಲಿ ಅಪ್ಪು ಭಾವಚಿತ್ರಕ್ಕೆ ಹೂ ಹಾಕುವ ಮೂಲಕ ಜೈಕಾರ ಹಾಕಲಾಗುತ್ತಿದೆ. ಸದ್ಯ ಬೇರೆ ಬೇರೆ ಕಡೆಯಿಂದ ಅಭಿಮಾನಿಗಳು ಬರುತ್ತಲಿದ್ದು, ಪೊಲೀಸರು ರಸ್ತೆ ಬಂದ್ ಮಾಡಲು ಸಾಕಷ್ಟು ಶ್ರಮಿಸಬೇಕಾಗಿದೆ.

Edited By : Manjunath H D
PublicNext

PublicNext

31/10/2021 07:42 am

Cinque Terre

71.36 K

Cinque Terre

0

ಸಂಬಂಧಿತ ಸುದ್ದಿ