ಬೆಂಗಳೂರು: ಕನ್ನಡದ ಒಂದು ಕಾಲದ ನಾಯಕ ನಟಿ ರಮ್ಯಾ ತಮ್ಮ ನೆಚ್ಚಿನ ನಾಯಕ ಪುನೀತ್ ಬಗ್ಗೆ ಮನದುಂಬಿ ಮಾತನಾಡಿದ್ದಾರೆ. ಮಾತಿನ ಮೂಲಕವೇ ಅಪ್ಪು ಅಗಲಿಕೆಗೆ ಸಂತಾಪ ಸೂಚಿಸಿದ ರಮ್ಯ, ಅಪ್ಪು ಸರಳ ವ್ಯಕ್ತಿತ್ವದ ಅಷ್ಟೂ ಸತ್ಯಗಳನ್ನ ಈಗ ಬಿಚ್ಚಿಟ್ಟಿದ್ದಾರೆ.
ರಮ್ಯಾ ಮತ್ತು ಪುನೀತ್ ಅಭಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದಾದ ಮೇಲೆ ಹೆಚ್ಚು ಕಡಿಮೆ ನಾಲ್ಕು ಸಿನಿಮಾದಲ್ಲಿಯೇ ಅಪ್ಪು ಮತ್ತು ರಮ್ಯಾ ಅಭಿನಯಿಸಿದ್ದಾರೆ. ಇವರ ಈ ಜೋಡಿ ಸೂಪರ್ ಅಂದವ್ರೇ ಹೆಚ್ಚು.ಅದಕ್ಕೇನೆ ರಮ್ಯಾ ತಮ್ಮ ಕಂಬ್ಯಾಕ್ ಮಾಡೋ ವೇಳೆ ಪುನೀತ್ ಅವರೊಟ್ಟಿಗೆ ಕೆಲ ತಿಂಗಳ ಹಿಂದೆ ಚರ್ಚಿಸಿದ್ದಾರೆ. ತಮ್ಮ ಬಳಿ ಬಂದ ಕಥೆಗಳ ಬಗ್ಗೆನೂ ಪುನೀತ್ ಜೊತೆಗೆ ಮಾತು-ಕಥೆ ನಡೆಸಿದ್ದಾರೆ.
ಹಾಗೇನೆ ಪುನೀತ್ ಎಂದೂ ರಾಜಕುಮಾರ್ ಪುತ್ರ ಅಂತ ತೋರಿಸಿಕೊಳ್ಳಲೇ ಇಲ್ಲ.ಅವರ ಸರಳ ವ್ಯಕ್ತಿತ್ವದಿಂದಲೇ ಎಲ್ಲರ ಹೃದಯ ಕದ್ದಿದ್ದರು. ತುಂಬಾ ಸಿಂಪಲ್ ಆಗಿ ಹೇಗೆ ಇರೋದು ಅನ್ನೊದನ್ನ ಪುನೀತ್ ರಿಂದಲೇ ಕಲಿತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ನಟಿ ರಮ್ಯಾ.
PublicNext
29/10/2021 04:53 pm