ಬೆಂಗಳೂರು: ನಮ್ಮೂರ ಮಂದಾರ ಹೂವೆ ಚಿತ್ರ ಖ್ಯಾತಿಯ ನಟಿ ಪ್ರೇಮಾ ಮತ್ತೆ ಬಣ್ಣ ಹಚ್ಚಲಿದ್ದಾರೆ. ಈ ಸಲ ಇವರು ವಕೀಲೆಯ ಪಾತ್ರದಲ್ಲಿಯೇ ಮಿಂಚಲಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬಾ ಚೂಸಿಯಾಗಿರೋ ಪ್ರೇಮಾ, ಈಗ 'ವೆಡ್ಡಿಂಗ್ ಗಿಫ್ಟ್' ಹೆಸರಿನ ಚಿತ್ರ ಒಪ್ಪಿಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ.
ಪ್ರೇಮಾ ಬಹುತೇಕ ಸಿನಿಮಾರಂಗದಿಂದ ದೂರವೇ ಉಳಿದಿದ್ದರು.'ಉಪೇಂದ್ರ ಮತ್ತೆ ಹುಟ್ಟಿ ಬಾ' ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದರು. ಈಗ ಇವರನ್ನ ಹುಡುಕಿಕೊಂಡು ವೆಡ್ಡಿಂಗ್ ಗಿಫ್ಟ್ ಹೆಸರಿನ ಸಿನಿಮಾ ಬಂದಿದೆ. ಇದನ್ನ ಒಲ್ಲೆ ಅಂತ ಹೇಳದ ಪ್ರೇಮಾ, ಈ ಚಿತ್ರದಲ್ಲಿ ವಕೀಲೆಯ ಪಾತ್ರವನ್ನೇ ನಿರ್ವಹಿಸುತ್ತಿದ್ದಾರೆ.ನವೆಂಬರ್ ನಿಂದಲೇ ಪ್ರೇಮಾ ಪಾತ್ರದ ಚಿತ್ರೀಕರಣ ಪ್ಲಾನ್ ಆಗಿದೆ. ವಿಕ್ರಂ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ಸೋನು ಗೌಡ ಹಾಗೂ ನಿಶಾನ್ ನಾಣಯ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉತ್ಸಾಹಿ ತಂಡದೊಂದಿಗೆ ಕೆಲಸ ಮಾಡಲು ನಟಿ ಪ್ರೇಮಾ ಕೂಡ ರೆಡಿ ಆಗುತ್ತಿದ್ದಾರೆ.
PublicNext
25/10/2021 01:50 pm