ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕರ ವಿರುದ್ಧ ಎಫ್ ಐ ಆರ್

ಚಿತ್ರದುರ್ಗ: ಕೋಟಿಗೊಬ್ಬ-3 ನಿರ್ಮಾಪಕ ಎಂ.ಬಿ ಬಾಬು ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಹೌದು ರಾಮ್ ಬಾಬು ಪ್ರೊಡಕ್ಷನ್ಸ್ ನಿರ್ಮಾಪಕ ವಿರುದ್ದ ವಿತರಕ ಖಾಝಾಪೀರ್ ದೂರು ಸಲ್ಲಿಸಿದ್ದಾರೆ. ಅಗ್ರಿಮೆಂಟ್ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅದರಂತೆ ನಿರ್ಮಾಪಕನ ಮೇಲೆ ಪೊಲೀಸರು ಐಪಿಸಿ ಕಲಂ 506 ಅಡಿ ಎಫ್ ಐಆರ್ ದಾಖಲಿಸಿದ್ದಾರೆ.

Edited By : Nirmala Aralikatti
PublicNext

PublicNext

17/10/2021 12:56 pm

Cinque Terre

40.03 K

Cinque Terre

1