ಮೈಸೂರು:ನವರಸ ನಾಯಕ ಜಗ್ಗೇಶ್ ಬೆಳ್ಳಿ ತೆರೆ ಮೇಲೆ ಸಖತ್ ಕಾಮಿಡಿ ಮಾಡುತ್ತಾರೆ. ಆದರೆ ರಿಯಲ್ ಲೈಫ್ ಅಲ್ಲಿ ಜಗ್ಗೇಶ್ ತುಂಬಾ ಸೀರಿಯಸ್.ದೈವ ಭಕ್ತಿನೂ ಜಾಸ್ತಿ ಇದೆ.ದಸರಾ ಹಬ್ಬರದ ಪ್ರಯುಕ್ತ ಮೈಸೂರಿನಲ್ಲಿ ಚಂಡಿಕಾಯಾಗಾ ಮಾಡಿದ್ದಾರೆ.
ಜಗ್ಗೇಶ್ ಅವ್ರು ಮೈಸೂರಲ್ಲಿ ತಮ್ಮ ಕನ್ವೆನ್ಷನ್ ಹಾಲ್ ಕಟ್ಟಿಸಿದ್ದಾರೆ. ಈ ಹಾಲ್ ನಲ್ಲಿಯೇ ಮೊನ್ನೆ ಅಂದ್ರೆ, ಶನಿವಾರ ಮತ್ತು ಭಾನುವಾರ ಎರಡು ದಿನದ ಚಂಡಿಕಾಯಾಗ ನಡೆದಿದೆ. ಎರಡೂ ದಿನ ಈ ಯಾಗದಲ್ಲಿ ಭಾಗಿ ಆಗಿದ್ದ ಜಗ್ಗೇಶ್ ಅವ್ರ, ಎಲ್ಲರಿಗೂ ಒಳ್ಳೆಯದಾಗಲಿ ಅಂತಲೇ ಕೇಳಿಕೊಂಡಿದ್ದಾರೆ. ಯಾಗದ ಒಂದಷ್ಟು ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದನ್ನ ಜಗ್ಗೇಶ್ ಅಭಿಮಾನಿಗಳೂ ಎಲ್ಲೆಡೆ ಹಂಚುತ್ತಿದ್ದಾರೆ.
PublicNext
13/10/2021 06:15 pm