ಹೈದರಾಬಾದ್ : ಟಾಲಿವುಡ್ ನ ಮುದ್ದಾದ ಜೋಡಿ ನಟ ನಾಗ ಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ಡಿವೋರ್ಸ್ ಬಳಿಕ ನಟಿ ಸಮಂತಾ ಅವರನ್ನು ನಟ ಸಿದ್ದಾರ್ಥ್ ಕುಟುಕಿದ್ದಾರೆ. ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನ ಸುದ್ದಿ ಹೊರ ಬರುತ್ತಿದ್ದಂತೆ ಟ್ವೀಟ್ ಮಾಡಿರುವ ಸಿದ್ದಾರ್ಥ್ ಮಾಜಿ ಪ್ರೇಯಸಿಗೆ ಟಾಂಗ್ ಕೊಟ್ಟಿದ್ದಾರೆ.
ಶೃತಿ ಹಾಸನ್ ಜೊತೆಗಿನ ಪ್ರೀತಿ ಮುರಿದು ಬಿದ್ದ ನಂತರ ಸಿದ್ದಾರ್ಥ್ ಗೆ ಸಿಕ್ಕದ್ದೆ ಸಮಂತಾ. ತೆಲುಗಿನ "ಜಬರ್ದಸ್ತ್" ಸಿನಿಮಾ ಸೆಟ್ಟಿನಲ್ಲಿ ಸಮಂತಾ ಹಾಗೂ ಸಿದ್ದಾರ್ಥ್ ಪರಿಚಯವಾಗುತ್ತದೆ. ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಯಾಗಿ ಪ್ರಮೋಟ್ ಆಗುತ್ತದೆ. ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ, ಅಷ್ಟರಲ್ಲಾಗಲೇ ಈ ಜೋಡಿ ಬೇರೆಯಾಗುತ್ತದೆ.
ಸಿದ್ದಾರ್ಥ್ ಅವರಿಂದ ದೂರವಾದ ಸಮಂತಾ ಅವರು ನಾಗಚೈತನ್ಯ ಅವರ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. 2017 ರಲ್ಲಿ ಮದುವೆಯಾಗುತ್ತಾರೆ. ಆದರೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟ 4 ವರ್ಷದಲ್ಲಿ ವಿಚ್ಛೇದನ ಪಡೆದಿದ್ದಾರೆ. ಸಮಂತಾ ಅವರು ತಮ್ಮ ವಿಚ್ಛೇದನ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೆ ಟ್ವೀಟ್ ಮಾಡಿರುವ ಸಿದ್ದಾರ್ಥ್, ಮೋಸು ಮಾಡುವವರು ಎಂದಿಗೂ ಏಳಿಗೆಯಾಗುವುದಿಲ್ಲ ಎನ್ನುವ ಪಾಠವನ್ನು ಬಾಲ್ಯದಲ್ಲಿ ನನ್ನ ಶಿಕ್ಷಕರಿಂದ ಕಲಿತೆ ಎಂದು ಹೇಳಿದ್ದಾರೆ.
PublicNext
04/10/2021 02:59 pm