ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಜೋಡಿ ಹಕ್ಕಿ ದಿವ್ಯಾ ಮತ್ತು ಅರವಿಂದ ಬಿಗ್ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಮುಗಿದ್ದಿದೇ ತಡ ಎಲ್ಲಿಯೂ ಕಾಣಿಸಿಕೊಳ್ಳದ ಈ ಜೋಡಿ ಈಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ನೋಡುಗರ ಕಣ್ಣುಗಳಲ್ಲಿ ಹೊಸ ಕಿಕ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಅಂದ್ರೇನೆ ಒಂದ್ ರೀತಿಯ ನಶೆ. ಆರಂಭದಲ್ಲಿ ಇದ್ದ ಆ ಸೆಳೆತ ಕನ್ನಡದಲ್ಲಿ 8ನೇ ಸೀಸನ್ ಹೊತ್ತಿಗೆ ಬೇರೆ ಥರವೇ ಆಗಿದೆ. ಆದರೆ ಪ್ರತಿ ಬಿಗ್ ಬಾಸ್ ಸೀಸನ್ ಅಲ್ಲೂ ಒಂದ್ ಜೋಡಿ ಲವ್ ಬರ್ಡ್ ಆಗಿಯೇ ಹೊರ ಹೊಮ್ಮುತ್ತದೆ. ಅದರಂತೆ ಈ ಹಿಂದಿನ ಸೀಸನ್‌ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಇದ್ದರು. ಅವರ ಲೈಫ್ ಸೂಪರ್ ಬಿಡಿ. 8ರ ಬಿಗ್ ಬಾಸ್ ಅಲ್ಲೂ ಒಂದು ಜೋಡಿ ಮೋಡಿ ಮಾಡಿತ್ತು. ಅದುವೇ ದಿವ್ಯ ಉರುಡುಗ ಮತ್ತು ರೇಸರ್ ಅರವಿಂದ್.ಕೆ.ಪಿ.
ಹೌದು. ಈ ಜೋಡಿಯ ಲವ್ಲಿ ಜರ್ನಿ ಇಡೀ ಬಿಗ್ ಬಾಸ್‌ನಲ್ಲಿ ಪ್ರೇಕ್ಷಕರನ್ನು ಸೆಳೆದು ಬಿಟ್ಟಿತು. ಆದರೆ ಸೀಸನ್ ಮುಗಿದಿದ್ದೇ ತಡ ಇವರ ಲವ್ ಲೈಫ್ ಬಗ್ಗೆ ಗಾಸಿಪ್‌ಗಳೆ ಹರಿದಾಡಿವು. ಆಗ ಮದುವೆ ಆಗ್ತಾರೆ. ಈಗ ಮದುವೆ ಆಗ್ತಾರೆ ಅಂತಲೇ ಸುದ್ದಿ ಇನ್ನು ಹರಿದಾಡುತ್ತಲೇ ಇದೆ. ಹೀಗಿರುವಾಗ ಈ ಜೋಡಿ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡದ್ದೇ ಇರಲಿಲ್ಲ. ಆದರೆ ಈಗ ಈ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದೆ. ದಿವ್ಯ ಉರುಡುಗ ಮತ್ತು ಅರವಿಂದ್ ಒಟ್ಟಿಗೆ ಕಾಣಿಸಿಕೊಂಡು ಪ್ರೇಕ್ಷಕರಲ್ಲಿ ಹೊಸ ಸೆಳೆತ ಉಟ್ಟು ಮಾಡಿದ್ದಾರೆ. ಹಾಗೇನೆ ಕುದ್ದು ಅರವಿಂದ್ ಕೆ.ಪಿ. ತಾವು ಒಟ್ಟೊಟ್ಟಿಗೆ ಇರೋ ಫೋಟೋವನ್ನು ಇನ್‌ಸ್ಟಾದಲ್ಲೂ ಹಂಚಿಕೊಂಡಿದ್ದಾರೆ.
ಕಪ್ಪು ಸೂಟ್ ಧರಿಸಿರುವ ಅರವಿಂದ್ ಮತ್ತು ವಿಶೇಷ ಡಿಸೈನ್ ಉಡುಗೆ ತೊಟ್ಟ ದಿವ್ಯಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಯಾಕ್ ವಿಶೇಷ ಉಡುಗೆ ಅನ್ನೋರಿಗೆ ಕುದ್ದು ಅರವಿಂದ್ ಹೇಳಿಕೊಂಡಿದ್ದಾರೆ. ಒಟ್ಟಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದೇವೆ. ಹಾಗಾಗಿಯೇ ಈ ವಿಶೇಷ ಲುಕ್ ಅಂತಲೂ ಇನ್‌ಸ್ಟಾದಲ್ಲಿ ಹೇಳಿಕೊಂಡಿದ್ದಾರೆ. ಈ ರೀತಿ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿರೋ ಈ ಬಿಗ್ ಬಾಸ್ ಜೋಡಿಯ ಮದುವೆ ಯಾವಾಗ ಅನ್ನೋರಿ ಇನ್ನೂ ಉತ್ತರ ಸಿಕ್ಕಿಯೇ ಇಲ್ಲ.
PublicNext
28/09/2021 07:36 pm