ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಛೇ ಎಂದ ಅಭಿಮಾನಿಗಳು

ಜಾಹೀರಾತಿನ ಮೂಲಕವೂ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿರುವ ರಶ್ಮಿಕಾ ವಿಕ್ಕಿ ಅವರ ಜತೆಯಲ್ಲಿ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ನೋಡಿದ ಅಭಿಮಾನಿಗಳು ರಶ್ಮಿಕಾಗೆ ಛೀಮಾರಿ ಹಾಕಿದ್ದಾರೆ.

ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವಾಗ ಅದರ ಕಾನ್ಸೆಪ್ಟ್ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಗರಂ ಆಗಿದ್ದಾರೆ.

ಈ ಜಾಹೀರಾತಿನಲ್ಲಿ ಬರುವ ದೃಶ್ಯ ಈ ರೀತಿ ಇದೆ. ರಶ್ಮಿಕಾ ಮಂದಣ್ಣ ಯೋಗ ಟೀಚರ್ ಆಗಿರುತ್ತಾರೆ. ಅವರ ಕ್ಲಾಸ್ ನಲ್ಲಿ ವಿಕ್ಕಿ ಕೌಶಲ್ ಸೇರಿದಂತೆ ಕೆಲವರು ಯೋಗ ಮಾಡುತ್ತ ಇರುತ್ತಾರೆ. ಎರಡೂ ಕೈ ಮೇಲೆ ಎತ್ತಿರುವ ಭಂಗಿಯಲ್ಲಿ ವಿಕ್ಕಿ ಕೌಶಲ್ ನಿಂತುಕೊಂಡಿರುವಾಗ ಸೊಂಟದ ಭಾಗದಲ್ಲಿ ಅವರ ಒಳಉಡುಪಿನ ಪಟ್ಟಿ ಕಾಣಿಸುತ್ತದೆ. ರಶ್ಮಿಕಾ ಅದನ್ನು ಕಂಡು ಆಕರ್ಷಿತರಾಗುತ್ತಾರೆ. ಯೋಗ ಹೇಳಿಕೊಡುವುದನ್ನೇ ನಿಲ್ಲಿಸಿ, ಒಂದು ಕ್ಷಣ ಮೈಮರೆತು ಬಿಡುತ್ತಾರೆ!

ಅದರದ್ದೇ ಇನ್ನೊಂದು ಜಾಹೀರಾತಿನಲ್ಲಿ ಆಗ ತಾನೇ ಯೋಗ ಕ್ಲಾಸ್ ಕೊಠಡಿಗೆ ವಿಕ್ಕ ಕೌಶಲ್ ಎಂಟ್ರಿ ನೀಡುತ್ತಾರೆ. ಬೇಕಂತಲೇ ಅವರ ಯೋಗ ಮ್ಯಾಟ್ ಅನ್ನು ಎತ್ತರದ ಜಾಗದಲ್ಲಿ ರಶ್ಮಿಕಾ ಇಟ್ಟಿರುತ್ತಾರೆ. ಅದನ್ನು ತೆಗೆದುಕೊಳ್ಳಲು ವಿಕ್ಕಿ ಕೌಶಲ್ ಕೈ ಎತ್ತಿ ಕಷ್ಟಪಡುವಾಗ ಅವರ ಒಳಉಡುಪಿನ ಪಟ್ಟಿ ಮತ್ತೆ ಕಾಣಿಸುತ್ತದೆ. ರಶ್ಮಿಕಾ ಅದನ್ನು ನೋಡಿ ಖುಷಿಪಡುತ್ತಾರೆ. ಸದ್ಯ ಯೂಟ್ಯೂಬ್ ನಲ್ಲೂ ಈ ಜಾಹೀರಾತುಗಳು ಬಿತ್ತರ ಆಗುತ್ತಿವೆ.

ಸ್ಟಾರ್ ಕಲಾವಿದರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವಾಗ ಅದರ ಕಾನ್ಸೆಪ್ಟ್ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಪುರುಷರ ಒಳಉಡುಪು ನೋಡಿ ಮಹಿಳೆ ಆಕರ್ಷಿತಳಾಗುತ್ತಾಳಾ? ಈ ಜಾಹೀರಾತಿನ ಮೂಲಕ ಹೆಣ್ಮಕ್ಕಳ ಮನಸ್ಥಿತಿಯನ್ನು ತಪ್ಪಾಗಿ ಬಿಂಬಿಸಲಾಗಿದೆಯಾ? ಒಂದು ವೇಳೆ ಈ ಜಾಹೀರಾತಿನಲ್ಲಿ ಹುಡುಗಿ ಜಾಗದಲ್ಲಿ ಹುಡುಗ ಇದ್ದು, ಆಕೆಯ ಒಳಉಡುಪು ಕಂಡು ಹುಡುಗನೇ ಈ ರೀತಿ ವರ್ತಿಸಿದ್ದರೆ ಅದು ವಿವಾದಕ್ಕೆ ಕಾರಣ ಆಗುತ್ತಿರಲಿಲ್ಲವೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

Edited By : Nirmala Aralikatti
PublicNext

PublicNext

26/09/2021 03:52 pm

Cinque Terre

40.05 K

Cinque Terre

5