ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಬಾಲಿವುಡ್ ನಟಿ ಮತ್ತು ಮಾಜಿ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯ ಬಗ್ಗೆ ಇದೀಗ ಬಿಸಿಬಿಸಿ ಚರ್ಚೆಯಾಗುತ್ತಿದೆ. ಸದ್ಯ ವೈರಲ್ ಆಗಿರುವ ಗಾಸಿಪ್ ಗೆ ಪುಷ್ಠಿನೀಡುವಂತಿವೆ ಈ ಫೋಟೋಗಳು..ಹೌದು ದೀಪಿಕಾ ಪಡುಕೋಣೆ ಮತ್ತು ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇತ್ತೀಚಿಗಷ್ಟೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ಭಾರತಕ್ಕೆ ಹೆಮ್ಮೆ ತಂದ ನಂತರ ಅನೇಕ ಸೆಲೆಬ್ರಿಟಿಗಳು ಇವರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದರು. ಮೆಗಾಸ್ಟಾರ್ ಕುಟುಂಬ ಪಿವಿ ಸಿಂಧು ಅವರಿಗಾಗಿ ವಿಶೇಷ ಸಂಭ್ರಮ ಕೂಟ ಹಮ್ಮಿಕೊಂಡಿದ್ದರು. ಔತಣ ಕೂಟದಲ್ಲಿ ಅನೇಕರು ಭಾಗಿಯಾಗಿದ್ದರು.
ಅದೇ ರೀತಿ ದೀಪಿಕಾ ಪಡುಕೋಣೆ ಪಿವಿ ಸಿಂಧು ಅವರನ್ನು ಭೇಟಿಯಾಗಿದ್ದರು. ಈ ವೇಳೆ ಇವರಿಬ್ಬರ ನಡುವೆ ಒಂದು ಒಪ್ಪಂದವಾಗಿದೆ ಎನ್ನುವ ಮಾತು ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.
ಪಿ.ವಿ ಸಿಂಧು ಅವರ ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಿದ್ಧವಾಗುತ್ತಿದೆಯಂತೆ. ಸಿಂಧು ಬಯೋಪಿಕ್ ನಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ದೀಪಿಕಾ- ಸಿಂಧು ಬ್ಯಾಡ್ಮಿಂಟನ್ ಆಟ ಬಲು ಜೋರು ಬಯೋಪಿಕ್ ಮಾಡ್ತೀರಾ ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.
ಸದ್ಯ ಪಿವಿ ಸಿಂಧು ಮತ್ತು ದೀಪಿಕಾ ಆಟದ ಝಲಕ್ ಫ್ಯಾನ್ಸ್ ಮನಗೆದ್ದಿದೆ. ‘ಇದು ಮಾಮೂಲಿಯಂತೆ ಮತ್ತೊಂದು ದಿನ. ಸಿಂಧು ಅವರೊಂದಿಗೆ ಆಟವಾಡುತ್ತಾ ಕ್ಯಾಲೋರಿಗಳನ್ನು ಕಳೆದುಕೊಳ್ಳುತ್ತಿದ್ದೇನೆ’ ಎಂದು ಬರೆದುಕೊಂಡು ದೀಪಿಕಾ ಆಟದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
PublicNext
22/09/2021 12:38 pm