ಗಾಯಕಿ ಇಂಪನಾ ಮತ್ತು ನಟ ಅಜಿತ್ ಜಯರಾಜ್ ಸೆ.1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಅದ್ಧೂರಿ ಮದುವೆಯ ಕಲರ್ ಫುಲ್ ಫೋಟೋಗಳು ಇಲ್ಲಿವೆ ನೋಡಿ
ಕನ್ನಡ ಕಿರುತೆರೆಯ ‘ಸರಿಗಮಪ ಸೀಸನ್-13’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಜನಪ್ರಿಯತೆ ಪಡೆದ ಗಾಯಕಿ ಇಂಪನಾ ಜಯರಾಜ್. ಬಳಿಕ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್’ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.
ಸದ್ಯ ಇಂಪನಾ ಜಯರಾಜ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಅಜಿತ್ ಜಯರಾಜ್ ‘ರೈಮ್ಸ್’ ಹಾಗೂ ‘ಕ್ರಾಂತಿವೀರ’ ಸಿನಿಮಾಗಳಲ್ಲಿ ಅಭಿನಯಿಸಿ ಈಗ ಇಂಪನಾ ಜಯರಾಜ್ ಜೊತೆಗೆ ಹೊಸ ಜೀವನ ಪ್ರಾರಂಭಿಸಿದ್ದಾರೆ.
PublicNext
03/09/2021 10:18 pm