ಬೆಂಗಳೂರು : ಸಾಗರದಾಚೆಗೂ ಬಾಲಿವುಡ್ ಹಾಗೂ ದಕ್ಷಿಣ ಭಾರತ ಸಿನಿಮಾಗಳ ಹಾಡುಗಳು ಸದ್ದು ಮಾಡುತ್ತವೆ. ಸದ್ಯ ತಮ್ಮ 25 ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಮೆರಿಕದ ರಿಕ್ಕಿ ಪಾಂಡ್ ಹಾಗೂ ರೋಕ್ಸಾನ್ ಪಾಂಡ್ ದಂಪತಿ, ಶಾರುಖ್ ಖಾನ್–ಕರೀನಾ ಕಪೂರ್ ಅಭಿನಯದ ರಾಒನ್ ಸಿನಿಮಾದ ‘ಚಮ್ಮಕ್ ಚಲ್ಲೊ‘ ಹಾಡಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದ್ದಾರೆ.
ಸದ್ಯ ಈ ವಿಡಿಯೊ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದ್ದು, ಈ ವೃದ್ದ ದಂಪತಿಯ ಜೀವನೋತ್ಸಾಹಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ರಿಕ್ಕಿ ಪಾಂಡ್ ಅವರು ಅಮೆರಿಕದಲ್ಲಿ ಇತ್ತೀಚೆಗೆ ‘ಡ್ಯಾನ್ಸಿಂಗ್ ಡ್ಯಾಡಿ‘ ಎಂದೇ ಮನೆಮಾತಾಗುತ್ತಿದ್ದಾರೆ. ಒಟ್ಟಿನಲ್ಲಿ ಭಾರತೀಯ ಹಾಡುಗಳಿಗೆ ಪಾಶ್ಚಿಮಾತ್ಯರು ಮಾರು ಹೋಗುತ್ತಾರೆ ಎಂಬುದನ್ನು ರಿಕ್ಕಿ ಪಾಂಡ್ ಸಾಬೀತುಪಡಿಸಿದ್ದಾರೆ.
PublicNext
31/08/2021 02:01 pm