ಬೆಂಗಳೂರು: ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಇಡೀ ದೇಶವೇ ಆಚರಿಸುತ್ತಿದೆ. ನಟಿ ಮೇಘನಾ ರಾಜ್ ಅವರು ತಮ್ಮ ಮುದ್ದು ಕಂದನಿಗೆ ಕೃಷ್ಣನ ವೇಷ ಹಾಕಿ ಅದರ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜ್ಯೂನಿಯರ್ ಚಿರು ಫೋಟೋ ನೋಡಿದ ಮಕ್ಕಳ ಪ್ರೇಮಿಗಳು ಹಾಗೂ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ವಿಶೇಷ ದಿನದಂದು ಜ್ಯೂನಿಯರ್ ಚಿರು ಕೂಡ ಕೃಷ್ಣನ ವೇಷ ಧರಿಸಿ ಮುದ್ದು-ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ವಿಶೇಷವೆಂದರೆ ಜ್ಯೂನಿಯರ್ ಚಿರುಗೆ ನಟ ಪನ್ನಗಭರಣ ಮಗ ವೇದ ಭರಣ ಕೂಡ ಸಾಥ್ ನೀಡಿದ್ದು, ಇಬ್ಬರು ಸೋಫಾ ಮೇಲೆ ಕುಳಿತು ನವಿಲು ಗರಿ ಕೈಯಲ್ಲಿ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ.
PublicNext
30/08/2021 03:26 pm