ರಾಮನಗರ: ಸ್ಯಾಂಡಲ್‌ವುಡ್‌ನ ಕೃಷ್ಣ ಅಜೇಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ, ಗುರು ದೇಶಪಾಂಡೆ ನಿರ್ಮಾಣದ 'ಲವ್ ಯು ರಚ್ಚು' ಸಿನಿಮಾ ಶೂಟಿಂಗ್ ವೇಳೆ ಹೈ ಟೆನ್ಶನ್ ವೈರ್ ತಗುಲಿ ಫೈಟರ್ ವಿವೇಕ್ ಸಾವನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಈಗ ಸಿನಿಮಾದ ನಿರ್ದೇಶಕ ಶಂಕರ್ ರಾಜ್, ಫೈಟ್ ಮಾಸ್ಟರ್ ವಿನೋದ್ ಮತ್ತು ನಿರ್ಮಾಪಕ ಗುರುದೇಶ ಪಾಂಡೆಯವರನ್ನು ವಶಕ್ಕೆ ಪಡೆದಿದ್ದಾರೆ.
ಬಿಡದಿಯ ಈಗಲ್ಟನ್ ರೆಸಾರ್ಟ್ ಬಳಿ, ಜೋಗನಪಾಳ್ಯದಲ್ಲಿ ಸಿನಿಮಾದ ಸಾಹಸ ದೃಶ್ಯದ ಶೂಟಿಂಗ್ ನಡೆಯುತ್ತಿತ್ತು. ಸಾಹಸ ನಿರ್ದೇಶಕರಾದ ವಿನೋದ್ ನಿರ್ದೇಶಿಸುತ್ತಿದ್ದ ದೃಶ್ಯದಲ್ಲಿ ಅಸಿಸ್ಟೆಂಟ್ ಫೈಟರ್ ಆಗಿದ್ದರು. ಶೂಟಿಂಗ್ ವೇಳೆ 11 ಕೆವಿ ವಿದ್ಯುತ್ ತಂತಿ ತಗುಲಿ ಫೈಟರ್ ಅಸಿಸ್ಟೆಂಟ್ ವಿವೇಕ್ ಎಂಬುವರು ಸಾವನ್ನಪ್ಪಿದ ಕೂಡಲೇ ಪೊಲೀಸರು ದೂರು ದಾಖಲಿಸಿಕೊಂಡರು. ಪ್ರಕರಣದಲ್ಲಿ ನಿರ್ಮಾಪಕ ಗುರುದೇಶ ಪಾಂಡೆ A1, ನಿರ್ದೇಶಕ ಶಂಕರ್ ರಾಜ್ A2 ಮತ್ತು ಸಾಹಸ ನಿರ್ದೇಶಕ ವಿನೋದ್ A3 ಆಗಿದ್ದರು.
ಮೂವರು ಆರೋಪಿಗಳ ವಿರುದ್ಧ 304, 308 ಅಡಿಯಲ್ಲಿ ಬಿಡದಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಸೆಕ್ಷನ್ಸ್ ಪ್ರಕಾರ ಆರೋಪಿಗಳಿಗೆ 3-7 ವರ್ಷಗಳ ಶಿಕ್ಷೆ ನೀಡಲು ಅವಕಾಶವಿದೆ.
PublicNext
09/08/2021 05:02 pm