ಸ್ಟಾರ್ ನಟರ ಫ್ಯಾನ್ಸ್ ಗಳ ಮಾತಿನ ಚಕಮಕಿ ಇಂದು ತೀವ್ರ ಚರ್ಚೆಗೆ ಕಾರಣವಾಗಿದೆ 'ನವರಸ ನಾಯಕ' ಜಗ್ಗೇಶ್ ಮತ್ತು 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಭಿಮಾನಿಗಳ ನಡುವೆ ನಡೆದ ಮಾತುಗಳು ಇಂದು ಕನ್ನಡ ಚಿತ್ರರಂಗದಲ್ಲಿ ಹೊಸ ವಿವಾದ ಶುರು ಆಗಿದೆ.
ತಮ್ಮ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ವರದಿ ಕಂಡು ಜಗ್ಗೇಶ್ ಗರಂ ಆಗಿದ್ದಾರೆ. ಇದೇ ವೇಳೆ ಅವರು ಚಂದನವನದ ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ.
'ಸಿನಿಮಾ ರಂಗದಲ್ಲಿ ನಾನು 40 ವರ್ಷ ಕೆಲಸ ಮಾಡಿದ್ದೇನೆ. ನಾನು ಏನು ಎಂಬುದು ಮಾಧ್ಯಮದವರಿಗೆ ಗೊತ್ತಿದೆ. ಆದರೆ ಇಂದು ಜಗ್ಗೇಶ್ ಬಟಾಬಯಲಾದ ಎಂದು ಬರೆಯಲಾಗಿದೆ. ನನ್ನ ಜೊತೆ ಮಾತನಾಡಲು ಹುಡುಗರ ಬಂದಾಗ ನಾನೇನೂ ಓಡಿಹೋಗಿಲ್ಲ. ಯಾವುದೋ ಒಂದು ಸಣ್ಣ ವಿಷಯ ಇಟ್ಟುಕೊಂಡು ಜಗ್ಗೇಶ್ ಗೆ ಅಪಮಾನ ಮಾಡಿಬಿಟ್ವಿ ಅಂತ ನಿಮಗೆ ಅನಿಸಿದರೆ ಅದರಿಂದ ನನಗೆ ಯಾವುದೇ ನೋವು, ನಷ್ಟ ಇಲ್ಲ' ಎಂದು ಜಗ್ಗೇಶ್ ಹೇಳಿದ್ದಾರೆ.
'ಖಾಸಗಿ ಆಗಿ ನಾನು ಮಾತನಾಡಿದ್ದನ್ನು ಸಾರ್ವಜನಿಕವಾಗಿಸುವ ಕುತಂತ್ರ ಇದೆ ಎಂದ ಮಾತ್ರಕ್ಕೆ ನಾನು ಹೆದರಿಕೊಂಡು ಮನೆಯಲ್ಲಿ ಕೂತುಕೊಳ್ಳುತ್ತೇನೆ ಎಂಬ ಭಾವನೆ ಬೇಡ. ನಾನು ತಪ್ಪು ಮಾಡಿಲ್ಲ. ಯಾಕೆ ಹೆದರಿಕೊಳ್ಳಲಿ?' ಎಂದಿರುವ ಜಗ್ಗೇಶ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಮೈ ಮುಟ್ಟೋಕೆ ಯಾವನಿಗಾದ್ರೂ ಆಗತ್ತಾ?
'ಕನ್ನಡ ಕನ್ನಡ ಕನ್ನಡ ಎಂದು ಸತ್ತಿದ್ದೇನೆ. ಮುಂದೆಯೂ ಸಾಯುತ್ತೇನೆ. ನನಗೆ ಬಂದು ನೀವು ಅವಮಾನ ಮಾಡುತ್ತೀರಾ? ಜಗ್ಗೇಶ್ ಕಾಗೆ ಹಾರಿಸುತ್ತಾನೆ ಎನ್ನುತ್ತೀರಾ? ನನ್ನ ಬದುಕಿನಲ್ಲಿ ನಾನು ಕಾಗೆ ಹಾರಿಸುವುದಾಗಿದ್ದರೆ 20 ಸಾರಿ ಎಂಎಲ್ ಎ ಆಗುತ್ತಿದ್ದೆ. 20 ಬಾರಿ ಮಂತ್ರಿ ಆಗುತ್ತಿದ್ದೆ. ಬಕೆಟ್ ಹಿಡಿದು ಬೂಟ್ ನೆಕ್ಕಿದ್ದರೆ ನೂರಾರು ಪೋಸ್ಟ್ ಗಳನ್ನು ನಾನು ತೆಗೆದುಕೊಳ್ಳುತ್ತಿದ್ದೆ. ಇವತ್ತು ನಾನು ಸ್ವಾಭಿಮಾನಿಯಾಗಿ ಬದುಕುತ್ತಿರುವುದು ನಿಮ್ಮಿಂದ ಈ ಮಾತುಗಳನ್ನು ಕೇಳಿಸಿಕೊಳ್ಳೋಕೆ ಅಲ್ಲ. ನನ್ನನ್ನು ಘೇರಾವ್ ಮಾಡಿದ್ರಾ ಅಲ್ಲಿ? ನಂಗೆ ಯಾರಾದರೂ ಹೊಡೆಯೋಕೆ ಬಂದಿದ್ರಾ? ಈ ಕರ್ನಾಟಕದಲ್ಲಿ ನನ್ನ ಮೈ ಮುಟ್ಟೋಕೆ ಯಾವನಿಗಾದ್ರೂ ಆಗತ್ತಾ?' ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
23/02/2021 02:07 pm