ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ದೊಡ್ಡವರು ಬದುಕಿದ್ದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ'

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಅಭಿಮಾನಿಗಳ ಮುತ್ತಿಗೆ, ತರಾಟೆಯಿಂದ ಬೇಸರಗೊಂಡಿರುವ ಹಿರಿಯ ನಟ ಜಗ್ಗೇಶ್ ಅಸಮಾಧಾನ ಹೊರಹಾಕಿದ್ದಾರೆ.

ಟ್ವೀಟ್ ಮಾಡಿರುವ ಜಗ್ಗೇಶ, ''ಆತ್ಮೀಯರೆ ಇನ್ನುಮುಂದೆ ನನಗೆ ನೀವು, ನಿಮಗೆ ನಾನು. ಇನ್ಮುಂದೆ ನಾನು ಉದ್ಯಮದ ಯಾರದೇ ಹುಟ್ಟುಹಬ್ಬ, ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ. ಅವರಿವರನ್ನ ಭೇಟಿಯಾಗಿ ಹರಟೆ ಹೊಡೆಯೋದು ಇರುವುದಿಲ್ಲ. ಕೇವಲ ನನ್ನ ಸಿನಿಮಾ, ಟಿವಿ ಶೋಗಳಿಗೆ ಮೀಸಲಾಗಿರುತ್ತೇನೆ. ಯಾಕಂದ್ರೆ ನಮ್ಮ ರಂಗ ತುಂಬ ತಾಮಸವಾಗಿದೆ. ದೊಡ್ಡವರು ಬದುಕಿದ್ದಾಗಲೇ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ನಡೀತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು?: ನಿರ್ಮಾಪಕರೊಬ್ಬರ ಜೊತೆ ಫೋನ್ ಕರೆಯಲ್ಲಿ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ದರ್ಶನ್ ಅಭಿಮಾನಿಗಳನ್ನು ನಿಂದಿಸಿದ್ದಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಡಿ ಬಾಸ್ ಅಭಿಮಾನಿಗಳು ಸೋಮವಾರ ಮೈಸೂರಿನಲ್ಲಿ ನಡೆಯುತ್ತಿರುವ 'ತೋತಾಪುರಿ' ಚಿತ್ರದ ಚಿತ್ರೀಕರಣದ ಸ್ಪಾಟ್‌ಗೆ ಬಂದು ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದರು. ಅಷ್ಟೇ ಅಲ್ಲದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.

ಜಗ್ಗೇಶ್ ಅವರು ಕೆಲ ಸಮಯ ದರ್ಶನ್​ ಅಭಿಮಾನಿಗಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ''ನನ್ನ ತಪ್ಪಲ್ಲ, ನಾನು ಆ ರೀತಿ ಮಾತೇ ಆಡಿಲ್ಲ'' ಎಂದೂ ಎಷ್ಟು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ದರ್ಶನ್​ ಅಭಿಮಾನಿಗಳು ಇರಲಿಲ್ಲ. ಒತ್ತಾಯಕ್ಕೆ ಮಣಿದ ಜಗ್ಗೇಶ್, ದರ್ಶನ್ ಅಭಿಮಾನಿಗಳ ಕ್ಷಮೆ ಕೋರಿದ್ದರು. ನಂತರ ದರ್ಶನ್ ಅಭಿಮಾನಿಗಳು ಶೂಟಿಂಗ್‌ಗೆ ಅವಕಾಶ ಮಾಡಿಕೊಟ್ಟು ಅಲ್ಲಿಂದ ತೆರಳಿದ್ದರು.

Edited By : Vijay Kumar
PublicNext

PublicNext

23/02/2021 07:48 am

Cinque Terre

96.73 K

Cinque Terre

8

ಸಂಬಂಧಿತ ಸುದ್ದಿ