ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಟನೆಯ ಕೊನೆಯ ಚಿತ್ರ ರಾಜಮಾರ್ತಾಂಡದ ಟ್ರೈಲರನ್ನು ಚಿರು ಪುತ್ರ, ಜ್ಯೂನಿಯರ್ ಚಿರು ಲಾಂಚ್ ಮಾಡಿದ್ದಾನೆ. ಈ ಮುದ್ದಾದ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಶೇರ್ ಆಗುತ್ತಿದೆ.
ಪುಟ್ಟದಾದ ಮುದ್ದು ಕೈಬೆರಳುಗಳಿಂದ ಅಪ್ಪನ ಸಿನಿಮಾದ ರಾಜಮಾರ್ತಾಂಡ ಸಿನಿಮಾದ ಟ್ರೈಲರ್‌ನ ವೀಡಿಯೋ ಪ್ಲೇ ಮಾಡುತ್ತಿರುವ ವೀಡಿಯೋವನ್ನು ಮೇಘನಾರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಗರು ಸಿನಿಮಾ ಬಿಡುಗಡೆಯಾಗಿರುವ ದಿನವೇ ಚಿರು ಅಭಿನಯದ ರಾಜಮಾರ್ತಾಂಡ ಟ್ರೈಲರ್ ಮುದ್ದಾದ ಮಗನಿಂದ ಬಿಡುಗಡೆಯಾಗಿರುವುದು ವಿಶೇಷವಾಗಿದೆ.
PublicNext
19/02/2021 11:42 am