ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಕ್ಷನ್ ಪ್ರೀನ್ಸ್ ಧ್ರುವ ಸರ್ಜಾ ಅಭಿನಯದ "ಪೊಗರು" ಸಿನಿಮಾ ಈ ವಾರ ತೆರೆಗೆ

ಧ್ರುವ ಸರ್ಜಾ ಅಭಿನಯದ, ಬಹು ನಿರೀಕ್ಷಿತ "ಪೊಗರು" ಚಿತ್ರ‌ ಈ ವಾರ ಬಿಡುಗಡೆಯಾಗುತ್ತಿದೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ‌ ನಟಿಸಿರುವ ಈ ಚಿತ್ರದ ತಾರಾ ಬಳಗದಲ್ಲಿ ರಾಘವೇಂದ್ರ ರಾಜಕುಮಾರ್, ತಾರಾ ಅನುರಾಧ, ರವಿಶಂಕರ್, ಪವಿತ್ರ ಲೋಕೇಶ್, ಡಾಲಿ ಧನಂಜಯ, ಶಂಕರ್ ಅಶ್ವಥ್, ಗಿರಿಜಾ ಲೋಕೇಶ್, ಮಯೂರಿ, ತಬಲ ನಾಣಿ, ಚಿಕ್ಕಣ್ಣ, ಧರ್ಮ, ಕುರಿ ಪ್ರತಾಪ್, ಕರಿಸುಬ್ಬು ಮುಂತಾದವರಿದ್ದಾರೆ. ದಿವಂಗತ ಬುಲೆಟ್ ಪ್ರಕಾಶ್ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಶ್ರೀ ಜಗದ್ಗುರು ಮೂವೀಸ್ ಲಾಂಛನದಲ್ಲಿ ಬಿ.ಕೆ.ಗಂಗಾಧರ್ ಅವರು ನಿರ್ಮಿಸಿರುವ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ. ಅರುಣ್ ಬಾಲಾಜಿ ಕಥೆ ಬರೆದು, ಸಹ ನಿರ್ದೇಶನ ಮಾಡಿದ್ದಾರೆ.

ಚಂದನ್ ಶೆಟ್ಟಿ ಸಂಗೀತ ನೀಡಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿಜಯ್ ಮಿಲ್ಟನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ,‌ಹರ್ಷ ನೃತ್ಯ ನಿರ್ದೇಶನ, ಗಣೇಶ್, ಅನಲ್ ಅರಸು, ಜಾಲಿ ಬಾಸ್ಟಿನ್ ಸಾಹಸ‌ ನಿರ್ದೇಶನ, ಮೋಹನ್ ಬಿ ಕೆರೆ, ಬಹ್ಮ ಕಡಲಿ ಅವರ ಕಲಾ ನಿರ್ದೇಶನ ಹಾಗೂ ಶಿವಾರ್ಜುನ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ.

ಚಿತ್ರದ ಕೆಲವು ಭಾಗಗಳಿಗೆ ಸತ್ಯ ಹೆಗಡೆ ಹಾಗೂ ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದ್ದಾರೆ ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷನ ಉತ್ಸಾಹ ಕೆರಳಿಸಿರುವ ಸಿನಿಮಾ ಬಗ್ಗೆ ನಿರೀಕ್ಷೆಗಳು ದುಪ್ಪಟ್ಟಾಗಿವೆ.

Edited By : Vijay Kumar
PublicNext

PublicNext

17/02/2021 08:40 am

Cinque Terre

36.16 K

Cinque Terre

0