ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅವ್ರು ರೈತರಲ್ಲ, ಭಯೋತ್ಪಾದಕರು': ಕಂಗನಾ

ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿದ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನಾ ಅವರಿಗೆ ಪ್ರತ್ಯುತ್ತರ ನೀಡುವ ಬರದಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಮೊದಲು ರಿಹಾನಾ ಅಂತಾರಾಷ್ಟ್ರೀಯ ಮಾಧ್ಯಮವೊಂದು ರೈತರ ಪ್ರತಿಭಟನೆಯ ಕುರಿತು ವರದಿ ಮಾಡಿರುವುದನ್ನ ಉಲ್ಲೇಖಿಸಿ, ''ನಾವ್ಯಾಕೆ ಇದರ ಬಗ್ಗೆ ಮಾತನಾಡುತ್ತಿಲ್ಲ'' ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ನೀಡಿದ ಕಂಗನಾ, "ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಏಕೆಂದರೆ ಅವರು ರೈತರಲ್ಲ. ಭಾರತವನ್ನು ವಿಭಜಿಸಲು ಯತ್ನಿಸುತ್ತಿರುವ ಭಯೋತ್ಪಾದಕರು. ಈ ಮೂಲಕ ಚೀನಾ ನಮ್ಮ ವಿಭಜಿತ ಭಾರತದ ಮೇಲೆ ಸವಾರಿ ಮಾಡಲಿದೆ. ಬಹುತೇಕ ಅಮೆರಿಕದಂತೆ ಇದನ್ನೂ ಚೀನಿ ಕಾಲೋನಿಯಾಗಿ ಮಾರ್ಪಡಿಸಲಿದೆ. ತೆಪ್ಪಗೆ ಕುಳಿತುಕೋ ಮೂರ್ಖಿ. ನಾವು ನಮ್ಮ ದೇಶವನ್ನು ನಿಮ್ಮಂತೆ ಕೈಗೊಂಬೆಗಳ ರೀತಿ ಮಾರಾಟ ಮಾಡುತ್ತಿಲ್ಲ" ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

03/02/2021 11:16 am

Cinque Terre

77.58 K

Cinque Terre

18