ಕೇಂದ್ರ ಸರ್ಕಾರ ಕೊಟ್ಟರೂ ರಾಜ್ಯ ಸರ್ಕಾರ ಕೊಡಲಿಲ್ಲ' ಎಂದು ಬೇಸರಪಟ್ಟುಕೊಳ್ಳುವ ಪರಿಸ್ಥಿತಿ ರಾಜ್ಯದ ಚಿತ್ರಮಂದಿರ ಮಾಲೀಕರದ್ದು. ಫೆಬ್ರವರಿ 1 ರಿಂದ ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಸಿನಿಮಾ ನೋಡಲು ಅವಕಾಶ ನೀಡಬಹುದು ಎಂದು ಕೇಂದ್ರ ಸರ್ಕಾರ ಆದೇಶ ಮಾಡಿತ್ತು.
ಆದರೆ ರಾಜ್ಯ ಸರ್ಕಾರ ಹೊಸದೊಂದು ಆದೇಶ ಹೊರಡಿಸಿ, ಈ ತಿಂಗಳ ಅಂತ್ಯದವರೆಗೆ 50% ಪ್ರೇಕ್ಷಕರಿಗಷ್ಟೆ ಸಿನಿಮಾ ಮಂದಿರದೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದಿದೆ. ರಾಜ್ಯ ಸರ್ಕಾರದ ಹೊಸ ಆದೇಶವು ಇಂದಷ್ಟೆ (ಜನವರಿ 02) ಹೊರಬಿದ್ದಿದ್ದು , ರಾಜ್ಯದಲ್ಲಿ ಕೊರೊನಾ ಪೂರ್ಣವಾಗಿ ಕಡಿಮೆಯಾಗಿಲ್ಲ, ಜೊತೆಗೆ ಕೊರೊನಾ ಎರಡನೇ ಅಲೆ ಸಹ ಬರುವ ಸಾಧ್ಯತೆ ಇರುವ ಕಾರಣ ಚಿತ್ರಮಂದಿರಗಳು ಯಥಾಸ್ಥಿತಿ ಮುಂದುವರೆಸಬೇಕೆಂದು ಆದೇಶ ನೀಡಲಾಗಿದೆ.
PublicNext
02/02/2021 10:58 pm