ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಅವರು ಫ್ಯಾಶನ್ ಡಿಸೈನರ್ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಮುಂಬೈನ ಭಾನುವಾರ ಅಲಿಬಾಗ್‌ನ ಐಷಾರಾಮಿ ರೆಸಾರ್ಟ್ ‘ದಿ ಮ್ಯಾನ್ಷನ್ ಹೌಸ್’ನಲ್ಲಿ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆದಿದೆ. ನಂತರ ವರುಣ್ ಧವನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಎರಡು ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ "ಲೈಫ್ ಲಾಂಗ್ ಲವ್ ಇದೀಗ ಅಧಿಕೃತವಾಯಿತು" ಎಂದು ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಜೋಡಿಯ ಮದುವೆ ಸುದ್ದಿ ಹರಿದಾಡುತ್ತಿತ್ತು. ಮೇ 2020ರಲ್ಲಿ ಧವನ್, ದಲಾಲ್ ಕೈಹಿಡಿಯಲು ನಿಶ್ಚಯಿಸಿದ್ದರು ಆದರೆ ಕೋವಿಡ್-19ನಿಂದಾಗಿ ಮದುವೆಯನ್ನು 2021ಕ್ಕೆ ಮುಂದೂಡಲಾಗಿತ್ತು. ನಿನ್ನೆ ಸಂಜೆ 6:30ರಿಂದ ಇವರ ಮದುವೆ ಶಾಸ್ತ್ರಗಳು ಆರಂಭವಾಗಿ ರಾತರಿ 10:30ಕ್ಕೆ ವಿವಾಹ ಸಂಪನ್ನವಾಗಿತ್ತು.
ವರದಿಗಳ ಪ್ರಕಾರ, ಆಪ್ತ ಉದ್ಯಮದ ಸ್ನೇಹಿತರಾದ ಕರಣ್ ಜೋಹರ್, ಶಶಾಂಕ್ ಖೈತಾನ್ ಮತ್ತು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಸೇರಿದಂತೆ ಸುಮಾರು 50 ಜನರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
PublicNext
25/01/2021 08:48 am