ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ತಂತ್ರಜ್ಞಾನದಲ್ಲಿ ಮತ್ತೆ ತೆರೆಗೆ ಬರಲಿದೆ ಭಾಗ್ಯವಂತರು

ಡಾ.ರಾಜಕುಮಾರ್, ಬಿ ಸರೋಜಾದೇವಿ 1977 ರಲ್ಲಿ ತೆರೆ ಮೇಲೆ ಒಂದಾಗಿ ಅಭಿನಯಿಸಿದ್ದ ಭಾಗ್ಯವಂತರು ಸಿನಿಮಾ ಆ ಕಾಲದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳಿಸಿ ಹೆಸರುವಾಸಿ ಆಗಿತ್ತು.

ಇಂದಿಗೂ ಆ ಸಿನಿಮಾ ಹಾಡು ಹಾಗೂ ಕಥೆ ಒಂದೇಳೆ ಸಿಕ್ರೂ ಸಾಕು ಮರಳಿ ಎಲ್ಲವೂ ಥಟ್ಟ ಎಂದು ನೆನಪಾಗಿ ಬಿಡುತ್ತದೆ.

ಸದ್ಯ ಮತ್ತದೆ ಡಾ.ರಾಜಕುಮಾರ್ ಬಿ.ಹರೋಜಾದೇವಿ ಮನೋಜ್ಞ ನಟನೆಯ ಕೌಟುಂಬಿಕ ಚಿತ್ರ ಆಧುನಿಕ ತಂತ್ರಜ್ಞಾನದೊಂದಿಗೆ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಪ್ರಖ್ಯಾತ ಹಿರಿಯ ವಿತರಕ ಮುನಿರಾಜು ತಮ್ಮ ಮುನೇಶ್ವರ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ಮರು ಬಿಡುಗಡೆ ಮಾಡಲು ಪಣ ತೊಟ್ಟಿದ್ದಾರೆ.

ಮುನಿರಾಜು ಅವರು ಪ್ರಸ್ತುತ ಕೃಷ್ಣಾಚಾರಿ ಎಂಬ ಸಿನಿಮಾ ಮಾಡುತ್ತಿದ್ದು ಅದರ ಜೊತೆಗೆ ಭಾಗ್ಯವಂತರು ಸಿನಿಮಾ ಕೆಲಸವನ್ನು ಮುಂದುವರೆಸಿದ್ದಾರೆ.

ಸಿನಿಮಾಸ್ಕೋಪ್ 7.1ಡಿಐ ತಂತ್ರಜ್ಞಾನ ಬಳಸಿಕೊಂಡು ಸಿನಿಮಾವನ್ನು ತಾಂತ್ರಿಕವಾಗಿ ಹೊಸದಾಗಿ ಕಲರಪುಲ್ ಶೈಲಿಗೆ ಬದಲಾವಣೆ ಮಾಡಲಾಗಿದೆ.

ಬೆಂಗಳೂರಿನ ನರ್ತಕಿ ಥೀಯೆಟರ್ ಸೇರಿದಂತೆ ಕರ್ನಾಟಕದಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭಾಗ್ಯವಂತರು ಸಿನಿಮಾ ಬಿಡುಗಡೆ ಆಗಲಿದೆ.

ಈ ಚಿತ್ರವನ್ನು ಅಂದು ದ್ವಾರಕೀಶ್ ಅವರು ನಿರ್ಮಿಸಿ, ಭಾರ್ಗವ ಅವರು ನಿರ್ದೇಶನ ಮಾಡಿದ್ದರು.

Edited By : Nirmala Aralikatti
PublicNext

PublicNext

08/01/2021 01:57 pm

Cinque Terre

50.51 K

Cinque Terre

1