ಇತ್ತೀಚೆಗಷ್ಟೆ ತಮ್ಮ ಬೇಬಿ ಬಂಪ್ ತೋರಿಸುತ್ತಾ ಮ್ಯಾಗ್ ಜಿನ್ ಫೋಟೋ ಶೂಟ್ ಮಾಡಿಸಿದ್ದ ನಟಿ ಅನುಷ್ಕಾ ತಮ್ಮ ಹಾಟ್ ಫೋಟೋಶೂಟ್ ಗೆ ಪೋಸ್ ಕೊಟ್ಟಿರುವ ಕ್ಯುಟ್ ಫೋಟೋ ಹಂಚಿಕೊಂಡಿದ್ದರು.
ಸದ್ಯ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಜಿಮ್ ನಲ್ಲಿ ನಡೆಸಿರುವ ವರ್ಕೌಟ್ ವಿಡಿಯೋ ಶೇರ್ ಮಾಡಿದ್ದಾರೆ.
ತುಂಬು ಗರ್ಭಿಣಿ ಅನುಷ್ಕಾ ಹಾಗೂ ವಿರಾಟ್ ಅವರ ಮನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಅತಿಥಿ ಬರಲಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅನುಷ್ಕಾ ಶರ್ಮಾ ಇನ್ನೂ ಸಹ ಫೊಟೋಶೂಟ್ ಗಳಲ್ಲಿ ವರ್ಕೌಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗಷ್ಟೆ ಫೋಟೋಶೂಟ್ ನಲ್ಲಿ ಅನುಷ್ಕಾ ತಮ್ಮ ಬೇಬಿ ಬಂಪ್ ತೋರಿಸುತ್ತಾ ಹಾಟ್ ಫೋಟೋಶೂಟ್ ಗೆ ಪೋಸ್ ಕೊಟ್ಟಿದ್ದಾರೆ.
ತಮ್ಮ ಈ ಬೇಬಿ ಬಂಪ್ ಫೋಟೋಶೂಟ್ ಬಗ್ಗೆ ಅನುಷ್ಕಾ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನನಗಾಗಿ ಸೆರೆ ಹಿಡಿದ ಚಿತ್ರಗಳು ಎಂದಿದ್ದಾರೆ.
ಸದ್ಯ ತುಂಬು ಗರ್ಭಿಣಿ ಯಾಗಿದ್ದರೂ ಜಿಮ್ ನಲ್ಲಿ ವರ್ಕೌಟ್ ಮಾಡಿರುವ ವಿಡಿಯೋ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಪತಿ ವಿರಾಟ್ ಕೊಹ್ಲಿ ಎಲ್ಲಾ ರೀತಿಯ ಕ್ರಿಕೆಟ್ ನಿಂದ ರಜೆ ಪಡೆದುಕೊಂಡಿದ್ದು ಪತ್ನಿ ಜೊತೆ ಕಾಲಕಳೆಯುತ್ತಿದ್ದಾರೆ.
ಅದೇನೆ ಇರಲಿ ವೈದ್ಯರ ಸಲಹೆ ಮೇರೆಗೆ ಅನುಷ್ಕಾ ವಿವಿಧ ರೀತಿಯ ಯೋಗಾಸನ ಸೇರಿದಂತೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
PublicNext
05/01/2021 09:29 am