ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಚರ್ಚ್‌ಗೆ ಬಂದು ಪ್ರೇಯರ್ ಮಾಡಿದ ರಜನಿಕಾಂತ್: ಯಾಕೆ ಗೊತ್ತಾ?

ಬೆಂಗಳೂರು: ಕೋವಿಡ್ ಎರಡನೇ ಅಲೆ ಬಂದು ಹೋದ ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನಿನ್ನೆ ಹಠಾತ್ತನೆ ಬೆಂಗಳೂರಿಗೆ ಭೇಟಿ ನೀಡಿದ ರಜನಿಕಾಂತ್, ನಗರದ ಚರ್ಚ್‌ ಒಂದಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಗಳ ಆರೋಗ್ಯ ಚೇತರಿಕೆ ಆಗಬೇಕೆಂದು ರಜನೀಕಾಂತ್ ಹರಕೆ ಹೊತ್ತಿದ್ದರಂತೆ ಹಾಗಾಗಿ ಬೆಂಗಳೂರಿನ ವಿವೇಕನಗರದಲ್ಲಿರುವ ಇನ್‌ಫೆಂಟ್ರಿ ಚರ್ಚ್‌ಗೆ ತಲೈವಾ ರಜನೀಕಾಂತ್ ನಿನ್ನೆ ರಾತ್ರಿ ಭೇಟಿ ನೀಡಿದ್ದರು.

ಮಗಳ ಆರೋಗ್ಯ ಕೆಟ್ಟಾಗ ರಜನೀಕಾಂತ್ ಇದೇ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಿದ್ದರಂತೆ. ಅಂತೆಯೇ ಈಗ ಹರಕೆ ತೀರಿಸಲೆಂದು ರಜನೀಕಾಂತ್ ಚರ್ಚ್‌ಗೆ ಆಗಮಿಸಿದ್ದರು. ಸಾಮಾನ್ಯರಂತೆ ರಜನೀಕಾಂತ್ ಚರ್ಚ್‌ಗೆ ಆಗಮಿಸಿದ್ದು ಕಂಡು ಅಲ್ಲಿದ್ದವರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ.

Edited By : Nagaraj Tulugeri
PublicNext

PublicNext

13/10/2021 02:05 pm

Cinque Terre

67.45 K

Cinque Terre

1

ಸಂಬಂಧಿತ ಸುದ್ದಿ